ತಿರುವನಂತಪುರಂ: ಆಟೋ ಚಾಲಕನೊಬ್ಬ ಮಚ್ಚು ತೋರಿಸಿದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಬಸ್ ಚಾಲಕ ನೀಡಿದ ದೂರಿನ ಮೇರೆಗೆ ಆಟೋ ಚಾಲಕ ಶಂಶುದ್ದೀನ್ ನನ್ನು ಬಂಧಿಸಲಾಗಿದೆ.
ಘಟನೆ ಕೇರಳದ ಮಲಪ್ಪುರಂ ಬಳಿ ನಡೆದಿದೆ. ಕೊತ್ತಾಪುರದಿಂದ ಏರ್‌ಪೋರ್ಟ್ ಜಂಕ್ಷನ್‌ಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರಯಾಣಿಸುವಾಗ ಆಟೊರಿಕ್ಷಾ ಚಾಲಕ ಶಂಶುದ್ದೀನ್ ಗೆ ಮುಂದೆ ಸಾಗಲು ಸ್ಥಳಾವಕಾಶ ನೀಡುವಂತೆ ಬಸ್ ಚಾಲಕ ಹಾರ್ನ್ ಬಾರಿಸಿದ ಹಿನ್ನೆಲೆಯಲ್ಲಿ ಶಂಶುದ್ದೀನ್ ಆಟೋ ಒಳಗಿಂದ ಮಚ್ಚು ತೋರಿಸಿದ್ದ.
ಈ ಬಸ್ ಕೋಝಿಕ್ಕೋಡ್‌ನಿಂದ ಮಂಜೇರಿಗೆ ಹೋಗುತ್ತಿತ್ತು. ಶುಕ್ರವಾರ ಬೆಳಗ್ಗೆ 6.30ಕ್ಕೆ ಈ ಘಟನೆ ನಡೆದಿದ್ದು, ಬಸ್ ಚಾಲಕ ಕೊಂಡೊಟ್ಟಿ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಘಟನೆ ನಡೆದಿದ್ದು, ಬಸ್ ನೌಕರರು ಕೊಂಡೊಟ್ಟಿ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಶಂಶುದ್ದೀನ್ನನ್ನು ಬಂಧಿಸಿ ತನಿಖೆ ಆರಂಭಿಸಿದ್ದಾರೆ.