HEALTH TIPS

ಜಮ್ಮು: ಉಗ್ರರ ಹತ್ತಿಕ್ಕಲು ಹೆಚ್ಚುವರಿ ಪಡೆ

         ಶ್ರೀನಗರ: ಜಮ್ಮುವಿನಲ್ಲಿ ಒಂದು ತಿಂಗಳಿನಿಂದ ಭಯೋತ್ಪಾದನಾ ಚಟುವಟಿಕೆಗಳು ತೀವ್ರಗೊಂಡಿರುವುದರಿಂದ, ಶಾಂತಿ ಸ್ಥಾಪಿಸುವುದಕ್ಕಾಗಿ ಹೆಚ್ಚುವರಿ ಸೇನಾ ತುಕಡಿಗಳನ್ನು ನಿಯೋಜಿಸಿ ಭದ್ರತೆಯನ್ನು ಬಲಪಡಿಸಲಾಗುತ್ತಿದೆ.

          ಜಮ್ಮು ವಲಯದ ದಟ್ಟ ಕಾಡಿನಲ್ಲಿ ನೆಲೆಯೂರಿರುವ ಭಯೋತ್ಟಾದಕರನ್ನು ಹತ್ತಿಕ್ಕಲು ಹಾಗೂ ಅವರ ಕೃತ್ಯಗಳಿಗೆ ಕಡಿವಾಣ ಹಾಕಲು ಹೆಚ್ಚುವರಿಯಾಗಿ 3,500 ಯೋಧರು, 500 ಅರೆ ಸೇನಾಪಡೆ ಯೋಧರನ್ನು ನಿಯೋಜಿಸಲಾಗಿದೆ.

          ಜಮ್ಮು ವಲಯದ ರಾಜೌರಿ, ಪೂಂಛ್‌, ರಿಯಾಸಿ, ಡೋಡಾ, ಕಠುವಾ ಜಿಲ್ಲೆಗಳಲ್ಲಿ ಕಳೆದ ಕೆಲವು ತಿಂಗಳಲ್ಲಿ ಸೇನೆ ಮತ್ತು ನಾಗರಿಕರನ್ನು ಗುರಿಯಾಗಿಸಿ ನಡೆದ ಭಯೋತ್ಪಾದಕ ಕೃತ್ಯಗಳು ನಾಗರಿಕರಲ್ಲಿ ಭೀತಿ ಮೂಡಿಸಿದೆ.


            ಗುಪ್ತದಳದ ಮಾಹಿತಿ ಅನುಸಾರ, ನೆಲೆಯೂರಿರುವ ಭಯೋತ್ಪಾದಕರು ಹೆಚ್ಚು ತರಬೇತಿ ಪಡೆದವರಲ್ಲ, ಆದರೆ, ಅವರ ಬಳಿ ಅತ್ಯಾಧುನಿಕ ಶಸ್ತ್ರಾಸ್ತ್ರಗಳಿವೆ. ಹೀಗಾಗಿ, ಅವರು ಪ್ರತಿರೋಧ ಒಡ್ಡಲು ಸಾಧ್ಯವಾಗಿದೆ. ಅವರ ದಾಳಿಯನ್ನು ಪರಿಣಾಮಕಾರಿಯಾಗಿ ಎದುರಿಸಲು ಸೇನೆ ಕೂಡಾ ಈಗ ಹೆಚ್ಚುವರಿ ಸಿಬ್ಬಂದಿ ನಿಯೋಜಿಸಿ, ಭದ್ರತೆ ಬಿಗಿಗೊಳಿಸಿದೆ.

        'ಜಮ್ಮುವಿನ ಕಾಡುಗಳಲ್ಲಿ ಅಡಗಿರುವ ಉಗ್ರರ ಚಟುವಟಿಕೆ ನಿರ್ಮೂಲನೆಗೆ 4,000 ಯೋಧರನ್ನು ನಿಯೋಜಿಸಿದ್ದು, ಗುಂಡುನಿರೋಧಕ ವಾಹನಗಳನ್ನು ಹೆಚ್ಚುವರಿಯಾಗಿ ಒದಗಿಸಲಾಗಿದೆ. ಭಯೋತ್ಪಾದಕರು ಅರಣ್ಯದಲ್ಲಿ ಪ್ರಕೃತಿ ಸಹಜ ಗುಹೆಗಳನ್ನೇ ನೆಲೆ ಮಾಡಿಕೊಂಡಿದ್ದಾರೆ. ಉಗ್ರರು ನೆಲೆಯೂರಿರುವ ಈ ವಲಯಗಳಲ್ಗಿ ಕಾರ್ಯಾಚರಣೆಗೆ ಕ್ಷಿಪ್ರ ಪ್ರತಿರೋಧಪಡೆಯ (ಕ್ಯುಆರ್‌ಟಿ) 37 ತುಕಡಿಗಳು ತೆರಳಿವೆ' ಎಂದು ಮೂಲಗಳು ವಿವರಿಸಿವೆ.

            'ಯೋಧರ ಹೊರತಾಗಿ 500 ಮಂದಿ ಉನ್ನತ ತರಬೇತಿ ಪಡೆದ ಕಮಾಂಡೊಗಳನ್ನೂ ಈ ವಿಶೇಷ ಕಾರ್ಯಾಚರಣೆಗಾಗಿ ನಿಯೋಜಿಸಲಾಗಿದೆ. ಈ ಕಮಾಂಡೊಗಳಿಗೆ ವಿಶೇಷ ಕೌಶಲವಿದೆ. ದಟ್ಟ ಕಾಡುಗಳಲ್ಲಿ ಸಂಕೀರ್ಣ ಕಾರ್ಯಾಚರಣೆಯನ್ನು ನಡೆಸಿರುವ ಅನುಭವವಿದೆ' ಎಂದು ಮೂಲಗಳು ವಿವರಿಸಿವೆ.

        ಉಗ್ರರು ಗುಹೆಗಳನ್ನೇ ಅಡಗುದಾಣವಾಗಿ ಮಾಡಿಕೊಂಡಿರುವುದೇ ಈಗ ಸೇನೆಗೆ ತನ್ನ ಕಾರ್ಯಾಚರಣೆಯಲ್ಲಿ ಎದುರಾಗಿರುವ ದೊಡ್ಡ ಸವಾಲು ಎಂಬುದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರ ಅಭಿಪ್ರಾಯ.

            'ಈ ಗುಹೆಗಳು ಪ್ರಕೃತಿ ಸಹಜವಾದ ರಕ್ಷಣೆ ಹೊಂದಿದ್ದು, ಎದ್ದು ಕಾಣುವುದಿಲ್ಲ. ಇಂತಹ ಅಡಗುತಾಣಗಳನ್ನು ಗುರುತಿಸಿ, ಉಗ್ರರ ನೆಲೆಯನ್ನು ನಿಷ್ಕ್ರಿಯಗೊಳಿಸುವುದೇ ಈಗಿರುವ ಸವಾಲಾಗಿದೆ' ಎಂದು ಅವರು ವಿವರಿಸಿದರು.

 ಜಮ್ಮುವಿನಲ್ಲಿ ಭದ್ರತೆಗೆ ನಿಯೋಜಿಸಿರುವ ವಿಶೇಷ ಪಡೆ ಸಿಬ್ಬಂದಿ ಶನಿವಾರ ಪೊಲೀಸ್‌ ಕೇಂದ್ರ ಕಚೇರಿ ಪ್ರವೇಶಿಸಿದರು -ಪಿಟಿಐ ಚಿತ್ರ

  * ಸೇನಾ ಮುಖ್ಯಸ್ಥ ಉಪೇಂದ್ರ ದ್ವಿವೇದಿ ಅವರು ಜಮ್ಮುವಿಗೆ ಶನಿವಾರ ಭೇಟಿ ಕೊಟ್ಟಿದ್ದಾರೆ * ಈ ತಿಂಗಳಲ್ಲಿ ಅವರ ಎರಡನೇ ಭೇಟಿ ಇದಾಗಿದೆ * ಸೇನೆಯ ಸನ್ನದ್ಧತೆಯ ಪರಿಶೀಲನೆ ನಡೆಸಿದ್ದಾರೆ

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries