ತಿರುವನಂತಪುರಂ: ರಕ್ಷಣಾ ವಲಯದಿಂದ ಕೆಲ್ಟ್ರಾನ್ ಗೆ ಮತ್ತೊಂದು ಮಹತ್ವದ ಬೇಡಿಕೆ ಲಭಿಸಿದೆ. ಕೆಲ್ಟ್ರಾನ್ ಅಂಗಸಂಸ್ಥೆ ಕುಟ್ಟಿಪುರಂ ಕೆಲ್ಟ್ರಾನ್ ಎಲೆಕ್ಟ್ರೋ ಸೆರಾಮಿಕ್ಸ್ ಲಿಮಿಟೆಡ್ (ಕೆಇಸಿಎಲ್) ರೂ.೧೭ ಕೋಟಿ ಮೌಲ್ಯದ ಬೇಡಿಕೆ(ಆರ್ಡರ್) ಸ್ವೀಕರಿಸಿದೆ.
ನೌಕಾಪಡೆಯ ಪ್ರಮುಖ ಯೋಜನೆಗಳಲ್ಲಿ ಒಂದಾದ ಎ.ಎಸ್.ಡಬ್ಲುö್ಯ ಶಾಲೋ ವಾಟರ್ ಕ್ರಾಫ್ಟ್ನ ಸೋನಾರ್ ಗಳಿಗೆ ಅಗತ್ಯವಿರುವ ಸುಧಾರಿತ ಸಂಜ್ಞಾಪರಿವರ್ತಕ ಅಂಶಗಳನ್ನು ತಯಾರಿಸಲು ಬೆಂಗಳೂರಿನ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್‌ನಿಂದ ಬೇಡಿಕೆ ಸ್ವೀಕರಿಸಲಾಗಿದೆ. ಇದರ ಆಧಾರದ ಮೇಲೆ, ಕೆಇಸಿಎಲ್ ಎರಡು ಸಾವಿರಕ್ಕೂ ಹೆಚ್ಚು ಸಂಜ್ಞಾಪರಿವರ್ತಕ(ಹೈಡ್ರೋಪೋನ್) ಅಂಶಗಳನ್ನು ತಯಾರಿಸಲಿದೆ.
ಸಂಜ್ಞಾಪರಿವರ್ತಕಗಳು ಹೈಡ್ರೋಫೋನ್‌ಗಳ ಪ್ರಮುಖ ಅಂಶವಾಗಿದೆ, ನೀರೊಳಗಿನ ಧ್ವನಿ ತರಂಗಗಳ ಮೂಲಕ ಇತರ ಹಡಗುಗಳು ಮತ್ತು ಜಲಾಂತರ್ಗಾಮಿ ನೌಕೆಗಳ ಉಪಸ್ಥಿತಿಯನ್ನು ಪತ್ತೆಹಚ್ಚಲು ಬಳಸುವ ಸಾಧನಗಳು. ಕೆಇಸಿಎಲ್ ಸಾರ್ವಜನಿಕ ವಲಯದ ಸಂಸ್ಥೆಯಾಗಿದ್ದು, ದೇಶದಲ್ಲಿ ದೇಶೀಯವಾಗಿ ಸಂಜ್ಞಾಪರಿವರ್ತಕಗಳನ್ನು ತಯಾರಿಸುತ್ತದೆ. ಕೆಲ್ಟ್ರಾನ್ ನೀರೊಳಗಿನ ವಲಯದಲ್ಲಿ ಹಲವು ವರ್ಷಗಳಿಂದ ನೌಕಾಪಡೆಗೆ ವಿವಿಧ ರಕ್ಷಣಾ ಎಲೆಕ್ಟ್ರಾನಿಕ್ಸ್ಗಳನ್ನು ತಯಾರಿಸುತ್ತಿದೆ.