ಕಾಸರಗೋಡು : ಅಡೂರು ಪಂಜಿಕಲ್ಲಿನ ಎಸ್‍ವಿಎಯುಪಿ ಶಾಲಾ ವಠಾರದಲ್ಲಿ ಉಪೇಕ್ಷಿತ ಸ್ಥಿತಿಯಲ್ಲಿ ಪತ್ತೆಯಾಗಿದ್ದ ನವಜಾತ ಶಿಶುವಿನ ಆರೈಕೆಯನ್ನು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ವಹಿಸಿಕೊಂಡಿದೆ. ಸಮಿತಿಯ ಸದಸ್ಯರಾದ ವಕೀಲೆ ರೇಣುಕಾದೇವಿ ತಂಗಚ್ಚಿ, ಅಹಮದ್ ಶರೀನ್, ವಕೀಲ ಶ್ರೀಜಿತ್ ಅವರು ಅಗತ್ಯ ಚಿಕಿತ್ಸೆ ನೀಡಿದ ನಂತರ ಕಾಸರಗೋಡು ಜನರಲ್ ಆಸ್ಪತ್ರೆಯಿಂದ ಮಗುವನ್ನು ವಶಕ್ಕೆ ಪಡೆದು ಚೇರೂರ್ ಮೇನಂಗೋಟ್‍ನಲ್ಲಿರುವ ಶಿಶು ವಿಕಾಸ ಭವನಕ್ಕೆ ಸ್ಥಳಾಂತರಿಸಿದರು.
ಮಗುವಿನ ಆರೋಗ್ಯದ ಬಗ್ಗೆ ಹಾಗೂ ಅಗತ್ಯ ಚಿಕಿತ್ಸೆ ಬಗ್ಗೆ ಜನರಲ್ ಆಸ್ಪತ್ರೆಯ ಉಪ ಅಧೀಕ್ಷಕ ಡಾ.ಜಮಾಲ್ ಅಹಮದ್ ಅವರೊಂದಿಗೆ ಸಮಿತಿ ಸದಸ್ಯರು ಚರ್ಚೆ ನಡೆಸಿದರು. ಮಗುವಿಗೆ ಒದಗಿಸಿರುವ ಚಿಕಿತ್ಸೆ ಹಾಗೂ ಸೌಲಭ್ಯಗಳ ಬಗ್ಗೆ ತೃಪ್ತಿ ವ್ಯಕ್ತಪಡಿಸಿತು. ಪ್ರಕರಣದ ತನಿಖೆ ನಡೆಸುತ್ತಿರುವ ಅಡೂರು ಪೆÇಲೀಸ್ ಠಾಣೆಗೆ ತೆರಳಿದ ಸಮಿತಿಯ ಸದಸ್ಯರು ತನಿಖೆಯ ಪ್ರಗತಿಯನ್ನು ಪರಿಶೀಲಿಸಿ ಅಗತ್ಯ ನೆರವಿನ ಭರವಸೆ ನೀಡಿದರು.
ಈ ಮಧ್ಯೆ ಮಗುವನ್ನು ತನ್ನ ವಶಕ್ಕೆ ನೀಡುವಂತೆ ಉಪೇಕ್ಷಿತ ಮಗುವಿನ ತಾಯಿ ಅಹವಾಲು ಮಂಡಿಸಿದ್ದಾಳೆ.