ಕೋಝಿಕ್ಕೋಡ್: ಅಂಕೋಲದಲ್ಲಿ ಘಟಿಸಿದ ಭೂಕುಸಿತದ ಬಳಿಕ ನಾಪತ್ತೆಯಾದ ಕೋಝಿಕ್ಕೋಡಿನ ಅರ್ಜುನ್ ಪತ್ತೆಗೆ ನಡೆಯುತ್ತಿರುವ ಹುಡುಕಾಟ ನಿಲ್ಲಿಸಬಾರದು ಎಂದು ಅರ್ಜುನ್ ಸಹೋದರಿ ಪುನರುಚ್ಚರಿಸಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಇಲ್ಲಿಯವರೆಗೆ ಸಹಾಯ ಮಾಡಿದ್ದು, ಸಹಾಯವನ್ನು ಮುಂದುವರೆಸಬೇಕು ಎಂದು ಸಹೋದರಿ ಹೇಳಿರುವರು.
'ನಾನು ಹುಡುಕಾಟವನ್ನು ಮುಂದುವರಿಸಲು ಬಯಸುತ್ತೇನೆ. ಇದುವರೆಗೆ ನಡೆದಿರುವ ರಕ್ಷಣಾ ಕಾರ್ಯದ ಜತೆಗೆ ಅಗತ್ಯ ಉಪಕರಣಗಳನ್ನು ತಲುಪಿಸಲು ಬಯಸಲಾಗಿದೆ. ರಾಜ್ಯ ಸರ್ಕಾರಗಳು ಮತ್ತು ಕೇಂದ್ರ ಸರ್ಕಾರ ನಮಗೆ ಎಲ್ಲಾ ರೀತಿಯಲ್ಲೂ ಸಹಾಯ ಮಾಡಿದೆ. ಪಕ್ಷ ರಾಜಕೀಯ ಭೇದವಿಲ್ಲದೆ ಎಲ್ಲರೂ ನಮ್ಮೊಂದಿಗೆ ಬೆಂಬಲವಾಗಿದ್ದಾರೆ.
ನಮಗೆ ಇನ್ನೂ ಅವರ ಬೆಂಬಲ ಮತ್ತು ಪ್ರೀತಿ ಬೇಕು. ಹುಡುಕುವುದನ್ನು ನಿಲ್ಲಿಸಬೇಡಿ ಎಂದು ನಾನು ಹೇಳಬಲ್ಲೆ. ಅಲ್ಲಿ ನಡೆಯುತ್ತಿರುವ ಕಾರ್ಯಾಚರಣೆ ಬಗ್ಗೆ ಮನೆಯವರಿಗೆ ತಿಳಿಸಲಾಗಿದೆ. ಎಲ್ಲಾ ಚೆನ್ನಾಗಿ ನಡೆಯುತ್ತಿದೆ. ಹುಡುಕುವುದನ್ನು ನಿಲ್ಲಿಸಬೇಡಿ ಎಂದು ನಾನು ಕೇಳಿಕೊಳ್ಳುವೆ. ಅರ್ಜುನ್ ಮಾತ್ರವಲ್ಲ, ಇನ್ನಿಬ್ಬರು ಪತ್ತೆಯಾಗಿಲ್ಲ. ಎಲ್ಲರೂ ಸಿಗುವವರೆಗೂ ಹುಡುಕಾಟ ಮುಂದುವರೆಯಬೇಕು ಎಂದು ತಿಳಿಸಿರುವರು.
ಲಾರಿಯನ್ನು ಗುರುತಿಸಲಾಗಿದೆ ಎಂದು ಶನಿವಾರ ಹೇಳಲಾಯಿತು. ಅದರ ಬಗ್ಗೆ ಈಗ ಏನೂ ತಿಳಿದಿಲ್ಲ. ಎಲ್ಲರೂ ಸಿಗುವವರೆಗೂ ಹುಡುಕಾಟ ಮುಂದುವರಿಯಬೇಕೆAದು ನಾವು ಬಯಸುತ್ತೇವೆ. ಅರ್ಜುನ್ ನಾಪತ್ತೆಯಾಗಿ ೧೩ ದಿನಗಳಾಗಿವೆ. ಯಾವುದೇ ಕಾರಣಕ್ಕೂ ಹಿಂದೆ ಸರಿಯಬೇಡಿ’ ಎಂದು ಅರ್ಜುನ್ ಸಹೋದರಿ ಹೇಳಿದ್ದಾರೆ.