ತಿರುವನಂತಪುರಂ: ಮಂಗಳೂರು-ನಾಗರ್‍ಕೋಯಿಲ್ ಪರಶುರಾಮ್ ಎಕ್ಸ್ ಪ್ರೆಸ್ (16649/16650) ಅನ್ನು ಕನ್ಯಾಕುಮಾರಿಯವರೆಗೆ ವಿಸ್ತರಿಸಲಾಗಿದೆ. ಇದರಲ್ಲಿ ಎರಡು ಹೆಚ್ಚುವರಿ ಕೋಚ್‍ಗಳನ್ನು ಅಳವಡಿಸಲಾಗಿದೆ.
ನಾಗರಕೋಯಿಲ್ ಜಂಕ್ಷನ್‍ನಲ್ಲಿ ನಡೆಯುತ್ತಿರುವ ಕಾಮಗಾರಿಯಿಂದಾಗಿ ಬದಲಾವಣೆ ಮಾಡಲಾಗಿದೆ ಎಂದು ರೈಲ್ವೆ ತಿಳಿಸಿದೆ. ಇದು ತಾತ್ಕಾಲಿಕ ಅಧಿಸೂಚನೆಯಾಗಿದೆ, ಆದರೆ ಈ ಸೇವೆಯು ಎಷ್ಟು ಕಾಲಾವಧಿಯ ವರೆಗೆ ಎಂಬುದು ಸ್ಪಷ್ಟವಾಗಿಲ್ಲ.
ಬುಧವಾರ ಮಂಗಳೂರಿನಿಂದ ಸಂಚಾರ ಆರಂಭಿಸುವ ಪರಶುರಾಮ್ ಎಕ್ಸ್‍ಪ್ರೆಸ್ ರಾತ್ರಿ 9.15ಕ್ಕೆ ಕನ್ಯಾಕುಮಾರಿ ತಲುಪಲಿದೆ. ಗುರುವಾರದಿಂದ ಕನ್ಯಾಕುಮಾರಿಯಿಂದ ಬೆಳಗಿನ ಜಾವ 3.45ಕ್ಕೆ ರೈಲು ಸಂಚಾರ ಆರಂಭಿಸಲಿದೆ. ರೈಲಿನಲ್ಲಿರುವ ಎರಡು ಹೊಸ ಬೋಗಿಗಳು ಸಾಮಾನ್ಯ ಆಸನ ಕೋಚ್‍ಗಳಾಗಿವೆ. ಇವುಗಳನ್ನು ಒಳಗೊಂಡಂತೆ, ರೈಲು 16 ಸಾಮಾನ್ಯ ಕೋಚ್‍ಗಳು, ಮೂರು ಎರಡನೇ ದರ್ಜೆಯ ಚೇರ್ ಕಾರ್ ಕೋಚ್‍ಗಳು, 2 ಎಸಿ ಚೇರ್ ಕಾರ್‍ಗಳು ಮತ್ತು 2 ವಿಶೇಷ ಚೇತನ ಸ್ನೇಹಿ ಕೋಚ್‍ಗಳನ್ನು ಹೊಂದಿರುತ್ತದೆ.