ಕುಂಬಳೆ: ಮಂಜೇಶ್ವರ ಕಾಲೇಜ್ ಆಫ್ ಅಪ್ಲೈಡ್ ಸೈನ್ಸ್ ನಲ್ಲಿ ಸಾರ್ವಜನಿಕರಿಂದ ಸಂಗ್ರಹಿಸಿದ ಹಣದಲ್ಲಿ ಕಾಲೇಜು ವಿದ್ಯಾರ್ಥಿ ಸಂಘ ನಿರ್ಮಿಸಿದ ವೇದಿಕೆಗೆ ಕಪ್ಪುಚುಕ್ಕೆ ಹಾಕಿದ ಸಮಾಜ ವಿರೋಧಿಗಳ ಕೃತ್ಯ ಆಕ್ಷೇಪಾರ್ಹ ಎಂದು ಮಹಿಳಾಮೋರ್ಚಾ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯೆ ಅಶ್ವಿನಿ ಎಂ.ಎಲ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಕೆಲ ವಾರಗಳ ಹಿಂದೆ ಯುವ ಐಕ್ಯವೇದಿ ಹೆಸರಿನಲ್ಲಿ ನಿರ್ಮಿಸಿರುವ ವೇದಿಕೆ ಉದ್ಘಾಟನೆಯಾಗಿದೆ. ತಾನು ಸೇರಿದಂತೆ ಹಿತೈಷಿಗಳ ಬೆಂಬಲದಿAದ ಕಾಲೇಜಿನಲ್ಲಿ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಿಗೆ ಶಾಶ್ವತ ಸ್ಥಳವನ್ನು ನಿರ್ಮಿಸಲು ಹಣವನ್ನು ಸಂಗ್ರಹಿಸಲಾಗಿದೆ. ಸ್ಥಳ ನಿರ್ಮಾಣಕ್ಕೆ ಏನನ್ನೂ ಮಾಡದ ಎಸ್‌ಎಫ್‌ಐ, ‘ಯುವ ಐಕ್ಯವೇದಿ’ ಹೆಸರು ಹಾಗೂ ಬೋರ್ಡ್ನ ಕೇಸರಿ ಬಣ್ಣ ಬದಲಾಯಿಸುವಂತೆ ಆಗ್ರಹಕ್ಕೆ ಮುಂದಾಗಿತ್ತು. ಐಕ್ಯವೇದಿ ಹೆಸರು, ಕೇಸರಿ ಬಣ್ಣ ಕಂಡರೆ ಅನೇಕರಿಗೆ ಅಸಹಿಷ್ಣುತೆ ಉಂಟಾಗುತ್ತದೆ. ಕಾಲೇಜಿನಲ್ಲಿ ಶಾಂತಿಯುತ ವಾತಾವರಣಕ್ಕೆ ಭಂಗ ತರುವ ಯತ್ನದ ವಿರುದ್ಧ ಕಾಲೇಜು ಅಧಿಕಾರಿಗಳು ಹಾಗೂ ಪೋಲೀಸರು ಕ್ರಮ ಕೈಗೊಳ್ಳಬೇಕು ಎಂದು ಅಶ್ವಿನಿ ಎಂ.ಎಲ್. ಆಗ್ರಹಿಸಿದ್ದಾರೆ.