HEALTH TIPS

ವಿಶ್ವವಿಖ್ಯಾತ ಹೃದಯ ಶಸ್ತ್ರಚಿಕಿತ್ಸಕ ಡಾ. ಎಂಎಸ್ ವಲ್ಯತ್ತಾನ್ ನಿಧನ

                 ತಿರುವನಂತಪುರಂ: ಶ್ರೀಚಿತ್ತಿರ ತಿರುನಾಳ್ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಮೊದಲ ನಿರ್ದೇಶಕ ಹಾಗೂ ವಿಶ್ವ ವಿಖ್ಯಾತ ಹೃದಯ ಶಸ್ತ್ರಚಿಕಿತ್ಸಕ ಡಾ.ಎಂ.ಎಸ್. ವಲ್ಯತ್ತಾನ್  ಎಂದೇ ಖ್ಯಾತರಾಗಿದ್ದ ಮಾರ್ತಾಂಡವರ್ಮ ಶಂಕರನ್ ವಲ್ಯತ್ತಾನ್(90) ಗುರುವಾರ ನಿಧನರಾದರು. ಭಾರತೀಯ ರಾಷ್ಟ್ರೀಯ ವಿಜ್ಞಾನ ಅಕಾಡೆಮಿಯ ಮಾಜಿ ಅಧ್ಯಕ್ಷರು ಮತ್ತು ರಾಷ್ಟ್ರೀಯ ಸಂಶೋಧನಾ ಪ್ರಾಧ್ಯಾಪಕರಾಗಿದ್ದರು. ಅಲ್ಲದೆ ಅವರು ಮಣಿಪಾಲ ವಿಶ್ವವಿದ್ಯಾಲಯದ ಮೊದಲ ವಿಸಿ ಆಗಿದ್ದರು. ಅವರು ತಿರುವನಂತಪುರಂ ವೈದ್ಯಕೀಯ ಕಾಲೇಜಿನ ಮೊದಲ ಬ್ಯಾಚ್ ವಿದ್ಯಾರ್ಥಿ.

                 ತಿರುವನಂತಪುರಂ ಯೂನಿವರ್ಸಿಟಿ ಕಾಲೇಜಿನಲ್ಲಿ ಅಧ್ಯಯನ ನಡೆಸಿದ ನಂತರ ತಿರುವನಂತಪುರಂ ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ಮುಗಿಸಿದರು. ಲಿವರ್‍ಪೂಲ್ ವಿಶ್ವವಿದ್ಯಾಲಯದಲ್ಲಿ ಎಂಎಸ್ ಅಧ್ಯಯನಗೈದಿದ್ದÀರು. ಬಳಿಕ ಪೋಸ್ಟ್ ಗ್ರಾಜುಯೇಟ್ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಎಜುಕೇಶನ್ ಅಂಡ್ ರಿಸರ್ಚ್ (ಪಿಜಿಐಎಂಎಆರ್), ಚಂಡೀಗಢದಲ್ಲಿ ಅಲ್ಪ ಸಮಯ ಕೆಲಸ ಮಾಡಿದ್ದರು. ಅವರು ಹೃದಯ ಶಸ್ತ್ರಚಿಕಿತ್ಸೆಯಲ್ಲಿ ಮುಂದುವರಿದ ಅಧ್ಯಯನಕ್ಕಾಗಿ ಜಾನ್ ಹಾಪ್ಕಿನ್ಸ್ ಸೇರಿದಂತೆ ಉನ್ನತ ವಿದೇಶಿ ವಿಶ್ವವಿದ್ಯಾಲಯಗಳಿಗೆ ತೆರಳಿ ಅಧ್ಯಯಯನ, ಸಂಶೋಧನೆ ನಡೆಸಿದ್ದರು. 

                 ತಿರುವನಂತಪುರಂನ ಶ್ರೀಚಿತ್ತಿರ ತಿರುನಾಳ್ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಮೊದಲ ನಿರ್ದೇಶಕರಾಗಿ ಅವರು ಕೇರಳೀಯರಿಗೆ ಹೆಚ್ಚು ಪರಿಚಿತರು. ಅವರು ವೈದ್ಯಕೀಯ ಸಂಸ್ಥೆಯ ದೃಷ್ಟಿಕೋನವನ್ನೇ ಬದಲಿಸಿದರು. ವೈದ್ಯಕೀಯ ತಂತ್ರಜ್ಞಾನಕ್ಕೆ ಹೆಚ್ಚಿನ ಒತ್ತು ನೀಡಿದ್ದರು. ವಿದೇಶದಿಂದ ಹೆಚ್ಚಿನ ಬೆಲೆಗೆ ಖರೀದಿಸಲಾಗುತ್ತಿದ್ದ ಹೃದಯ ಕವಾಟಗಳನ್ನು ಶ್ರೀಚಿತ್ರದಲ್ಲಿ ತಯಾರಿಸಿ ಭಾರತದಲ್ಲಿಯೇ ಪ್ರಥಮ ಬಾರಿಗೆ ಕಡಿಮೆ ಬೆಲೆಗೆ ವಾಲ್ವ್ ಲಭ್ಯವಾಗುವಂತೆ ಮಾಡಲು ಅವರ ನೇತೃತ್ವದಲ್ಲಿ ನಡೆದ ಪ್ರಯತ್ನಗಳು ಹೆಚ್ಚು ಮಹತ್ವದ್ದಾಗಿವೆ. ಇನ್ನೊಂದು ಉದಾಹರಣೆಯೆಂದರೆ ರಕ್ತದ ಚೀಲಗಳ ವ್ಯಾಪಕ ಉತ್ಪಾದನೆ.

               ಮಣಿಪಾಲ ವಿಶ್ವವಿದ್ಯಾಲಯದ ಮೊದಲ ಉಪಕುಲಪತಿಯಾಗಿದ್ದ ಡಾ. ವಲ್ಯತ್ತಾನ್  ನಂತರ ಆ ಮಾರ್ಗದಿಂದ ಆಯುರ್ವೇದದ ಸಂಶೋಧನೆಯತ್ತ ಸಾಗಿದರು. ಅಲೋಪತಿ ವೈದ್ಯರು ಮತ್ತು ಆಯುರ್ವೇದ ವೈದ್ಯರ ಮಧ್ಯೆ ಆಗಾಗ್ಗೆ ಉಂಟಾಗುವ ಕೆಲವು ಸಂಘರ್ಷದ ಮಧ್ಯೆ,ಇವರು  ಎರಡರಲ್ಲೂ ಅರ್ಹತೆಯನ್ನು ಕಂಡುಕೊಳ್ಳಲು ಪ್ರಯತ್ನಿಸಿದರು. ಆಯುರ್ವೇದ ಮತ್ತು ಅಲೋಪತಿಯ ಸಂಯೋಜನೆಯು ಮುಂದೆ ಸಾಗಿಸಬಹುದಾದ ಅನೇಕ ಸಲಹೆಗಳನ್ನು ಮುಂದಿಟ್ಟಿದೆ. ಕೋಝಿಕ್ಕೋಡ್ ಕೇರಳ ಸ್ಕೂಲ್ ಆಫ್ ಮ್ಯಾಥಮ್ಯಾಟಿಕ್ಸ್ ಅನ್ನು ಪ್ರಾರಂಭಿಸಲು ಮತ್ತು ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಪರಿಷತ್ತಿನ ಅಡಿಯಲ್ಲಿ ವಿವಿಧ ಸಂಸ್ಥೆಗಳನ್ನು ಏಕೀಕರಿಸಲು ಪ್ರಯತ್ನಗಳನ್ನು ಮಾಡಿದ್ದರು. ಅವರು ಭಾರತೀಯ ವಿಜ್ಞಾನ ಅಕಾಡೆಮಿಯ ಅಧ್ಯಕ್ಷರಾಗಿದ್ದರು. ಭಾರತ ಮತ್ತು ವಿದೇಶಗಳಲ್ಲಿ ಪದ್ಮವಿಭೂಷಣ ಸೇರಿದಂತೆ ಹಲವು ಗೌರವಗಳನ್ನು ಪಡೆದಿದ್ದಾರೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries