HEALTH TIPS

ಪುತ್ತೂರಿನ ವಾಹಿನಿ ಕಲಾಸಂಘದಿಂದ ವಿವಿಧ ಸ್ಪರ್ಧೆಗಳ ಆಯೋಜನೆ

                   

               ಪುತ್ತೂರು :  :ಪುತ್ತೂರಿನ ವಾಹಿನಿ ಕಲಾಸಂಘವು ಕಳೆದ ಹಲವು ವರ್ಷಗಳಿಂದ ಸಾಹಿತ್ಯ-ಸಾಂಸ್ಕøತಿಕ ಚಟುವಟಿಕೆಗಳ ಮೂಲಕ ನಾಡಿ-ನುಡಿಯ ಅಹರ್ನಿಶಿ ಸೇವೆಯಲ್ಲಿ ನಿರತವಾಗಿದ್ದು, ಹಲವು ಯುವ ಸಾಧಕರನ್ನು ಮುನ್ನೆಲೆಗೆ ತರುವಲ್ಲಿ ಪ್ರಧಾನ ಪಾತ್ರವಹಿಸುತ್ತಿದೆ. ಪ್ರಸ್ತುತ ಸಂಘಟನೆಯು ಕಥೆ, ಕವನ ಸ್ಪರ್ಧೆ ಏರ್ಪಡಿಸಿದೆ. ವಿವರಗಳು ಇಂತಿವೆ.

ವಾಹಿನಿ ಕಲಾ ಸಂಘ,ಪುತ್ತೂರು.
ಕಥಾಸ್ಪರ್ಧೆ-2024 ಮತ್ತು ಕವನ ಸ್ಪರ್ಧೆ-2024
೧. ಬರಹಗಾರರು ತಮ್ಮ ಇಷ್ಟದ ವಿಷಯದಲ್ಲಿ ಕತೆ,ಕವನಗಳನ್ನು ಕಳುಹಿಸಬಹುದು.
೨. ಕತೆ,ಕವನಗಳು ಸ್ವತಂತ್ರವಾಗಿರಬೇಕು.ಅನುವಾದ,ಅನುಕರಣೆಗಳಿಗೆ ಅವಕಾಶವಿಲ್ಲ.
೩. ಕತೆ,ಕವನಗಳು ಈ ಹಿಂದೆ ಎಲ್ಲಿಯೂ ಪ್ರಕಟಗೊಂಡಿರಬಾರದು. ವಿದ್ಯುನ್ಮಾನ ಮಾಧ್ಯಮ ಗಳಲ್ಲೂ ಪ್ರಕಟಿಸಿರಬಾರದು.
೪. ಯುವ ಮತ್ತು ಸಾರ್ವಜನಿಕ ಎಂಬ ಎರಡು ವಿಭಾಗಗಳಲ್ಲಿ ಸ್ಪರ್ಧೆ ಏರ್ಪಡಿಸಲಾಗುವುದು.ಸ್ಪರ್ಧೆಗಳಲ್ಲಿ  ದೇಶವಿದೇಶಗಳಲ್ಲಿ ವಾಸಿಸುವ ಕನ್ನಡಿಗರೆಲ್ಲರೂ ಭಾಗವಹಿಸಬಹುದು.16 ರಿಂದ 25 ವರ್ಷ ವಯೋಮಿತಿಯೊಳಗಿನ ವ್ಯಕ್ತಿಗಳು ಯುವ ವಿಭಾಗಕ್ಕೆ ಸ್ಪರ್ಧಿಸಬಹುದು. ಅವರು ವಿದ್ಯಾರ್ಥಿಗಳೇ ಆಗಿರಬೇಕು ಎಂದಿಲ್ಲ. ವಯಸ್ಸಿನ ಸ್ಪಷ್ಟೀಕರಣಕ್ಕಾಗಿ, ಶಾಲಾ ಪ್ರಮಾಣಪತ್ರ/ ಆಧಾರ್/ ಆದಾಯತೆರಿಗೆ ಪಾನ್ ಕಾರ್ಡ್ ಇವುಗಳಲ್ಲಿ ಒಂದರ  ಪ್ರತಿಯನ್ನು  ಲಗತ್ತಿಸಬೇಕು.
೫. ಕತೆಗಳು ಆರುನೂರು ಪದಗಳನ್ನು ಮೀರಬಾರದು. ಕವನಗಳು ಮೂವತ್ತು ಸಾಲುಗಳ ಒಳಗಿರಬೇಕು. ಕವನಗಳು ಛಂದೋಬದ್ಧವಾಗಿರಬೇಕು. ಷಟ್ಪದಿ,ಚೌಪದಿ,ಗಜಲ್,ಸಾನೆಟ್ ಇತ್ಯಾದಿಗಳಿಗೆ ಅವಕಾಶ ಇದೆ.ಚುಟುಕ,ಮುಕ್ತಕ,ಹನಿಗವನ,ಛಂದೋರಹಿತ ಕವಿತೆಗಳಿಗೆ ಅವಕಾಶವಿಲ್ಲ.
೬.ಕತೆ,ಕವನಗಳನ್ನು ಬರೆಯುವಾಗ ತಮ್ಮ ಹೆಸರು ವಿಳಾಸಗಳನ್ನು ಪ್ರತ್ಯೇಕವಾಗಿ ಬರೆದು ಲಗತ್ತಿಸಬೇಕು. ಇ ಮೇಲ್ ನಲ್ಲಿ ಕಳಿಸುವಾಗ ಕತೆ/ಕವನ ಮತ್ತು ಹೆಸರು ವಿಳಾಸಗಳನ್ನು ಬೇರೆ ಬೇರೆಯೇ" ಪಿಡಿಎಫ್/ ವರ್ಡ್ "   ಫೈಲುಗಳಲ್ಲಿ ಬರೆಯಬೇಕು ಹಾಗೂ ಆ ಫೈಲುಗಳನ್ನು ಲಗತ್ತಿಸಬೇಕು.
೭. ಒಬ್ಬರು ಎರಡು ಸ್ಪರ್ಧೆಗಳಲ್ಲೂ ಭಾಗವಹಿಸಬಹುದು.ಆದರೆ,ಒಂದೊಂದು   ಪ್ರವೇಶಕ್ಕೆ ಮಾತ್ರ  ಅವಕಾಶವಿರುತ್ತದೆ.
೮. ಕತೆ,ಕವನಗಳನ್ನು ವಾಟ್ಸಪ್ ಮೂಲಕ ಕಳುಹಿಸಬಾರದು.
೯. ಎರಡು ವಿಭಾಗಗಳಲ್ಲಿಯೂ ಅತ್ಯುತ್ತಮವಾದ ಒಂದು ಕತೆ ಮತ್ತು ಒಂದು ಕವನಕ್ಕೆ ನಗದು ಬಹುಮಾನವಿದೆ. ಕತೆಗೆ ನಗದು ಬಹುಮಾನ ರೂ. 750/ ಮತ್ತು ಕವನಕ್ಕೆ ರೂ.500/ ಎಂದು ನಿಗದಿಪಡಿಸಲಾಗಿದೆ.ಅಲ್ಲದೆ,ದ್ವಿತೀಯ,ತೃತೀಯ ಸ್ಥಾನ ಪಡೆದ ಉತ್ತಮವಾದ ಕತೆ/ ಕವನಗಳಿಗೆ ಪುಸ್ತಕ ಬಹುಮಾನ ನೀಡಲಾಗುತ್ತದೆ.
ಕತೆ,ಕವನಗಳನ್ನು ಕಳುಹಿಸಲು ವಿಳಾಸ:-
 ಎಸ್ ಕೆ ಗೋಪಾಲಕೃಷ್ಣ ಭಟ್,
 ಆಯೋಜಕರು,ವಾಹಿನಿ ಕತೆ/ ಕವನ ಸ್ಪರ್ಧೆ 2024,
  ನಂ.105, ಅಕ್ಷರ,ಬ್ರಾಡ್ವೇ ಇಲೈಟ್ ಅಪಾರ್ಟ್ಮೆಂಟ್,
 ಕುಳಾಯಿ ಹೊಸಬೆಟ್ಟು,ಮಂಗಳೂರು.575019
 ಇ ಮೈಲ್  madhuravahinikalasangha@gmail.com
 ಮೊಬೈಲ್ 9481023671
ಕತೆ,ಕವನಗಳನ್ನು ಸ್ವೀಕರಿಸುವ ಕೊನೆಯ ದಿನಾಂಕ 31.8.2024.
   ಎಲ್ಲರೂ ಭಾಗವಹಿಸಿ ಸ್ಪರ್ಧೆಗಳನ್ನು ಯಶಸ್ವಿಗೊಳಿಸಲು ಕೋರುವ,
ಮಧುರಕಾನನ ಗಣಪತಿ ಭಟ್,
ರಾಜ್ಯಾಧ್ಯಕ್ಷರು,ವಾಹಿನಿ ಕಲಾಸಂಘ,ದರ್ಬೆ,ಪುತ್ತೂರು-574202.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries