ತಿರುವನಂತಪುರ: ಕೇರಳ ನಿಪಾದಿಂದ ಮುಕ್ತವಾಗಿದೆ ಎಂದು ಆರೋಗ್ಯ ಸಚಿವೆ ವೀಣಾ ಜಾರ್ಜ್ ಹೇಳಿದ್ದಾರೆ. ಹರಡುವ ಲಕ್ಷಣಗಳಿಲ್ಲದಿದ್ದರೂ ಎಚ್ಚರಿಕೆಯನ್ನು ಮರೆಯಬಾರದು ಎಂದು ಸಚಿವರು ಹೇಳಿದರು.
ಸಂಪರ್ಕ ಪಟ್ಟಿಯಲ್ಲಿರುವ ಒಬ್ಬ ವ್ಯಕ್ತಿ ಮಾತ್ರ ಸಣ್ಣ ರೋಗಲಕ್ಷಣಗಳೊಂದಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಐಸಿಯುನಲ್ಲಿ ಯಾರೂ ಚಿಕಿತ್ಸೆ ಪಡೆಯುತ್ತಿಲ್ಲ ಎಂದು ಸಚಿವರು ತಿಳಿಸಿದ್ದಾರೆ.
೪೭೨ ಜನರು ಪ್ರಸ್ತುತ ಸಂಪರ್ಕ ಪಟ್ಟಿಯಲ್ಲಿದ್ದಾರೆ. ಇಲ್ಲಿಯವರೆಗೆ ಒಟ್ಟು ೮೫೬ ಜನರಿಗೆ ಮಾನಸಿಕ ಆರೋಗ್ಯ ಸೇವೆಗಳನ್ನು ಒದಗಿಸಲಾಗಿದೆ. ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನಿಪಾ ನಿಯಮಾವಳಿಗಳನ್ನು ನಿಯಮಾನುಸಾರ ಸಡಿಲಿಸಲು ನಿರ್ಧರಿಸಲಾಯಿತು. ಈ ಬಗ್ಗೆ ಜಿಲ್ಲಾಡಳಿತ ಆದೇಶ ಹೊರಡಿಸಲಿದೆ. ಪ್ರತ್ಯೇಕವಾಗಿ ಇರುವವರು ಕ್ವಾರಂಟೈನ್ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ರಕ್ಷಣಾ ಪ್ರಯತ್ನಗಳು ಬಲವಾಗಿ ಮುಂದುವರಿಯಲಿದೆ. ಮಾಸ್ಕ್ ಮತ್ತು ಸಾಮಾಜಿಕ ಅಂತರವನ್ನು ಮುಂದುವರಿಸಬೇಕು ಎಮದು ಸಚಿವರು ಸೂಚಿಸಿರುವರು.