ಬದಿಯಡ್ಕ: ಎಡನೀರು ಶ್ರೀಗಳ ಚತುರ್ಥ ಚಾತುರ್ಮಾಸ್ಯ ವ್ರತಾಚರಣೆಯ ಭಾಗವಾಗಿ 60 ದಿನಗಳ ಕಾಲ ನಡೆಯಲಿರುವ ಅಖಂಡ ಭಜನಾ ಸಂಕೀರ್ತನೆಗೆ ಭಾನುವಾರ ಬೆಳಗ್ಗೆ ಕಾಸರಗೋಡು ಚಿನ್ಮಯ ಮಿಶನ್‍ನ ಶ್ರೀ ವಿವಿಕ್ತಾನಂದ ಸರಸ್ವತೀ ಸ್ವಾಮೀಜಿ ದೀಪಬೆಳಗಿಸಿ ಚಾಲನೆಯನ್ನು ನೀಡಿದರು. ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ದಿವ್ಯ ಸಾನ್ನಿಧ್ಯ ವಹಿಸಿದ್ದರು. ನಂತರ ಎಡನೀರು ಶ್ರೀ ಗೋಪಾಲಕೃಷ್ಣ ಮಹಿಳಾ ಭಜನಾ ತಂಡದವರಿಂದ ಭಜನೆ ಜರಗಿತು.