ಇಟಾನಗರ: ಅರುಣಾಚಲ ಪ್ರದೇಶದ ವನ್ಯಜೀವಿ ಅಭಯಾರಣ್ಯದಲ್ಲಿ ಭಾರತೀಯ ಬೊಟಾನಿಕಲ್ ಸರ್ವೆ ಆಫ್ ಇಂಡಿಯಾ (ಬಿಎಸ್‌ಐ) ಸಂಶೋಧಕರು ಹೊಸ ಸಸ್ಯ ಪ್ರಭೇದವನ್ನು ಕಂಡುಹಿಡಿದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇಟಾನಗರ: ಅರುಣಾಚಲ ಪ್ರದೇಶದ ವನ್ಯಜೀವಿ ಅಭಯಾರಣ್ಯದಲ್ಲಿ ಭಾರತೀಯ ಬೊಟಾನಿಕಲ್ ಸರ್ವೆ ಆಫ್ ಇಂಡಿಯಾ (ಬಿಎಸ್‌ಐ) ಸಂಶೋಧಕರು ಹೊಸ ಸಸ್ಯ ಪ್ರಭೇದವನ್ನು ಕಂಡುಹಿಡಿದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪಾಪಮ್ ಪಾರೆ ಜಿಲ್ಲೆಯ ಇಟಾನಗರ ವನ್ಯಜೀವಿ ಅಭಯಾರಣ್ಯದಿಂದ ಇತ್ತೀಚೆಗೆ ಪತ್ತೆಯಾದ 'ಫ್ಲೋಗಾಕ್ಯಾಂಥಸ್ ಸುಧಾಂಶುಶೇಖರಿ' ಎಂಬ ಸಸ್ಯ ಪ್ರಭೇದವು 'ಅಕ್ಯಾಂಥೇಸಿಯ್ಯಾ' ಕುಟುಂಬದ 'ಫ್ಲೋಗಾಕ್ಯಾಂಥಸ್' ಜಾತಿಗೆ ಸೇರಿದೆ ಎಂದು ಅವರು ಹೇಳಿದರು.
ಭಾರತೀಯ ಹಿಮಾಲಯ ಪ್ರದೇಶದಲ್ಲಿ ಸಸ್ಯ ಮತ್ತು ಪರಿಸರ ಸಂಶೋಧನೆಗೆ ಮಹತ್ವದ ಕೊಡುಗೆ ನೀಡಿದ ಬಿಎಸ್‌ಐ ವಿಜ್ಞಾನಿ ಡಾ. ಸುಧಾಂಶು ಶೇಖರ್ ದಾಸ್ ಅವರನ್ನು ಗೌರವಿಸಲು ಈ ಹೊಸ ಸಸ್ಯ ಪ್ರಭೇದಕ್ಕೆ ಅವರ ಹೆಸರಿಸಲಾಗಿದೆ ಎಂದು ಬಿಎಸ್‌ಐ ಅಧಿಕಾರಿಗಳು ತಿಳಿಸಿದ್ದಾರೆ.
ಲೇಖಕರಾದ ಸಾಮ್ರಾಟ್ ಗೋಸ್ವಾಮಿ ಮತ್ತು ರೋಹನ್ ಮೈತಿ ಅವರು ಈ ಪ್ರಭೇದದ ಬಗ್ಗೆ ವಿವರವಾದ ಸಂಶೋಧನಾ ಪ್ರಬಂಧವನ್ನು 'ಇಂಡಿಯನ್ ಜರ್ನಲ್ ಆಫ್ ಫಾರೆಸ್ಟ್ರಿ'ಯಲ್ಲಿ ಪ್ರಕಟಿಸಿದ್ದಾರೆ.