ಮಧೂರು: ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕøತಿಕ ಪ್ರತಿಷ್ಠಾನ ಕಾಸರಗೋಡು, ಶ್ರೀ ಸತ್ಯಸಾಯಿ ಸೇವಾ ಬಳಗ. ಪೆರ್ಲ ಇವರ ಜಂಟಿ ಆಶ್ರಯದಲ್ಲಿ ನಿನ್ನೆ ಮಧ್ಯಾಹ್ನ 2-30 ರಿಂದ 5-30ರ ವರೆಗೆ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಭವನದಲ್ಲಿ ಉಚಿತ ಆಯುರ್ವೇದ ವೈದ್ಯಕೀಯ ಶಿಬಿರ ತಜ್ಞ ವೈದ್ಯರುಗಳಿಂದ ನಡೆಯಿತು.
ಉಚಿತ ವೈದ್ಯಕೀಯ ಆಯುರ್ವೇದ ಶಿಬಿರವನ್ನು ಡಾ. ಕೃಷ್ಣ ಮೋಹನ ಪೆರ್ಲ, ಡಾ.ಸತ್ಯನಾರಾಯಣ, ಸತ್ಯನಾರಾಯಣ ಹೆಗಡೆ, ವಾಸುದೇವ ಕಾರಂತ ಉಜಿರೆಕೆರೆ ಮುಂತಾದ ಗಣ್ಯರು ಸೇರಿ ದೀಪ ಪ್ರಜ್ವಲನೆಯ ಮೂಲಕ ಉದ್ಘಾಟಿಸಿದರು.
ಬಾಯಾರುಪದವು ಪ್ರಶಾಂತಿ ಕ್ಲಿನಿಕ್ ನ ಡಾ.ಸತ್ಯನಾರಾಯಣ ಬಿ, ಪೆರ್ಲದ ಚಿನ್ಮಯ ಕ್ಲಿನಿಕ್ ನ ಡಾ. ಕೃಷ್ಣಮೋಹನ ಬಿ. ಆರ್. ಅವರ ಮುಂದಾಳತ್ವದಲ್ಲಿ ಶ್ರೀ ಗೋಪಾಲಕೃಷ್ಣ ಫಾರ್ಮಸಿ ಕುಂಬಳೆ, ಡಾ. ರವಿನಾರಾಯಣ.ಸಂಜೀವಿನಿ ಕ್ಲಿನಿಕ್, ನೆಹರೂ ನಗರ, ಪುತ್ತೂರು, ಶ್ರೀ ಸದ್ಗುರು ಡಿಸ್ಟ್ರಿಬ್ಯೂಟರ್ ಕಬಕ, ಸೀ. ಕೇಮ್ . ಫಾರ್ಮಸಿ. ಬೆಂಗಳೂರಿನ ಕಿಶೋರ ಹೇರಳ ಉಡುವ ಸಹಕರಿಸಿದರು.
ಕಳೆದ ವರ್ಷ ಕೆಎಂಸಿಯ ಶಿಬಿರವನ್ನು ಪ್ರತಿಷ್ಠಾನ ನಡೆಸಿತ್ತು .ಸಿರಿಬಾಗಿಲು ಪ್ರತಿಷ್ಠಾನವು ಸಾಂಸ್ಕೃತಿಕ ಕಾರ್ಯಕ್ರಮಗಳ ಜೊತೆ ಸಮಾಜಕ್ಕೆ ಉಪಯುಕ್ತವಾಗುವ ಶಿಬಿರಗಳನ್ನು ಆಯೋಜಿಸುತ್ತಿರುವುದು ಒಂದು ಉತ್ತಮ ಕಾರ್ಯ ಎಂದು ಗಣ್ಯರು ಅಭಿಮತ ವ್ಯಕ್ತಪಡಿಸಿದರು. ಪ್ರತಿಷ್ಠಾನದಲ್ಲಿ ಮುಂದಿನ ದಿನಗಳಲ್ಲಿ ಈ ವರ್ಷವೂ ಕೆಎಂಸಿಯ ವೈದ್ಯಕೀಯ ತಪಾಸಣಾ ಶಿಬಿರವು ನಡೆಯಲಿರುತ್ತದೆ ಎಂದು ಪ್ರತಿμÁ್ಠನದ ಅಧ್ಯಕ್ಷ, ಯಕ್ಷಗಾನ ಭಾಗವತ ರಾಮಕೃಷ್ಣ ಮಯ್ಯ ತಿಳಿಸಿದರು.ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬೆದ್ರಡ್ಕ ಒಕ್ಕೂಟದ ಸಭೆ ಈ ಸಂದರ್ಭ ನಡೆಯಿತು.