ಮಾಸ್ಕೊ (AP): 'ಉಕ್ರೇನ್ ಮೇಲಿನ ಯುದ್ಧ ಗೆಲ್ಲಲ್ಲು ತನಗೆ ಅಣ್ವಸ್ತ್ರದ ಅಗತ್ಯವಿಲ್ಲ. ಆದರೆ, ಅದರ ಆಯ್ಕೆ ಯಾವಾಗಲೂ ಮುಕ್ತವಾಗಿರುತ್ತದೆ' ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ನ್ಯಾಟೊ ರಾಷ್ಟ್ರಗಳಿಗೆ ಸಂದೇಶ ರವಾನಿಸಿದ್ದಾರೆ.
ಮಾಸ್ಕೊ (AP): 'ಉಕ್ರೇನ್ ಮೇಲಿನ ಯುದ್ಧ ಗೆಲ್ಲಲ್ಲು ತನಗೆ ಅಣ್ವಸ್ತ್ರದ ಅಗತ್ಯವಿಲ್ಲ. ಆದರೆ, ಅದರ ಆಯ್ಕೆ ಯಾವಾಗಲೂ ಮುಕ್ತವಾಗಿರುತ್ತದೆ' ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ನ್ಯಾಟೊ ರಾಷ್ಟ್ರಗಳಿಗೆ ಸಂದೇಶ ರವಾನಿಸಿದ್ದಾರೆ.
'ಉಕ್ರೇನ್‌ಗೆ ಸೇನಾ ಬೆಂಬಲ ನೀಡುವ ವಿಷಯದಲ್ಲಿ ಹೆಚ್ಚು ಮುನ್ನುಗ್ಗಬೇಡಿ.
'ಉಕ್ರೇನ್ ಯುದ್ಧದಲ್ಲಿ ನಿಧಾನವಾಗಿ ಮಾಸ್ಕೊ ಮೇಲುಗೈ ಸಾಧಿಸುತ್ತಿದೆ. ಅದರ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ಪುಟಿನ್, ತನ್ನ ಗುರಿ ಸಾಧನೆಗೆ ಅಣ್ವಸ್ತ್ರಗಳ ಅಗತ್ಯವಿಲ್ಲ. ಆದರೆ ರಷ್ಯಾ ಅದನ್ನು ಎಂದಿಗೂ ಬಳಸುವುದಿಲ್ಲ ಎಂದು ಪಶ್ಚಿಮ ದೇಶಗಳು ಭಾವಿಸುವುದು ತಪ್ಪು' ಎಂದು ಹೇಳಿದ್ದಾರೆ.
ಇದನ್ನು ಹಗರುವಾಗಿ ಪರಿಗಣಿಸಬಾರದು. ದೇಶದ ಸಾರ್ವಭೌಮತೆ ಮತ್ತು ಪ್ರಾದೇಶಿಕ ಸಮಗ್ರತೆಗೆ ಧಕ್ಕೆಯಾದರೆ ಅಣ್ವಸ್ತ್ರ ಬಳಸಲು ರಷ್ಯಾ ಸಿದ್ಧ ಎಂದು ಅವರು ಪುನರುಚ್ಚರಿಸಿದ್ದಾರೆ.