ಕಾಸರಗೋಡು: ಕರ್ಕಾಟಕ ಮಾಸದಲ್ಲಿ ಬರುವ ರೋಗರುಜಿನಗಳನ್ನು ದೂರಮಾಡುವ ನಿಟ್ಟಿನಲ್ಲಿ ಔಷಧೀಯ ಗುಣವುಳ್ಳ 'ಕರ್ಕಾಟಕ ಗಂಜಿ'ವಿತರಣಾ ಕಾರ್ಯ ಕಾಸರಗೋಡು ಜಿಲ್ಲಾಧಿಕಾರಿ ಕಚೇರಿ ಹೊಂದಿರುವ ಸಿವಿಲ್ ಸ್ಟೇಶನ್ ವಠಾರದಲ್ಲಿ ನಡೆಯಿತು.
ಕುಟುಂಬಶ್ರೀ ಜಿಲ್ಲಾ ಮಿಷನ್ ವತಿಯಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾಸರಗೋಡು ಜಿಲ್ಲಾಧಿಕಾರಿ ಕೆ. ಇನ್ಬಾಶೇಖರ್ ಕರ್ಕಾಟಕ ಗಂಜಿ ಸೇವಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಅಪರ ಜಿಲ್ಲಾಧಿಕಾರಿ ಸುಫಿಯಾನ್ ಅಹಮದ್, ಕುಟುಂಬಶ್ರೀ ಜಿಲ್ಲಾ ಮಿಷನ್ ಸಂಯೋಜಕ ಟಿ.ಟಿ.ಸುರೇಂದ್ರನ್, ನವಕೇರಳ Pಕ್ರಿಯಾ ಯೋಜನೆ ಜಿಲ್ಲಾ ಸಂಯೋಜಕ ಕೆ. ಬಾಲಕೃಷ್ಣನ್, ಜಿಲ್ಲಾ ನಾಗರಿಕ ಪೂರೈಕೆ ಅಧಿಕಾರಿ ಕೆ.ಎನ್.ಬಿಂದು, ಜಿಲ್ಲಾ ಮಾಹಿತಿ ಅಧಿಕಾರಿ ಎಂ. ಮಧುಸೂದನನ್ ಉಪಸ್ಥಿತರಿದ್ದರು. ಕರ್ಕಾಟಕ ಗಂಜಿ ಫೆಸ್ಟ್ ಜುಲೈ ೨೭ರವರೆಗೆ ನಡೆಯಲಿದೆ. ಜೀರಿಗೆ, ಹಾಲು, ಮೆತ್ತೆ ಸೇರಿದಂತೆ ವಿವಿಧ ಔಷಧೀಯ ವಸ್ತುಗಳನ್ನು ಸೇರಿಸಿ ಕರ್ಕಾಟಕ ಗಂಜಿ ತಯಾರಿಸಲಾಗುತ್ತಿದೆ.