ಮಂಜೇಶ್ವರ: ತಲಪಾಡಿ ಟೋಲ್ ಗೇಟಿನಲ್ಲಿ ಸ್ಥಳೀಯರು ಅನುಭವಿಸುತ್ತಿರುವ ಕಿರುಕುಳಕ್ಕೊಂದು ಪರಿಹಾರವನ್ನು ಕಂಡುಕೊಳ್ಳಲು ಈವರೆಗೆ ಮುಂಜೇಶ್ವರದ ಯಾವುದೇ ಜನಪ್ರತಿನಿಧಿಗಳು ಮುತುವರ್ಜಿಯನ್ನು ವಹಿಸದಿರುವ ಮಧ್ಯೆ ಎಸ್.ಡಿ.ಪಿ.ಐ.ಯ ನೇತಾರರು ಇದೀಗ ಮಧ್ಯೆ ಪ್ರವೇಶಿಸಿ ಸ್ಥಳೀಯರ ಸಂಕಷ್ಟದ ಬಗ್ಗೆ ಅಧಿಕಾರಿಗಳಲ್ಲಿ ಧ್ವನಿಎಬ್ಬಿಸಿ ಪ್ರತಿಭಟನೆಯ ಎಚ್ಚರಿಕೆ ನೀಡಿರುವುದು ಸ್ಥಳೀಯ ಪ್ರಯಾಣಿಕರಲ್ಲಿ ಭರವಸೆ ಮೂಡಿಸಿದೆ.
ಕೋವಿಡ್ ಗೆ ಮುಂಚೆ ವಿವಿಧ ರಾಜಕೀಯ ಪಕ್ಷಗಳು ಹಾಗೂ ಟೋಲ್ ಗೇಟ್ ಹೋರಾಟ ಸಮಿತಿ ಎಂಬ ಹೆಸರಿನಲ್ಲಿ ಸಮಿತಿ ರೂಪೀಕರಿಸಿ ಸ್ಥಳೀಯರ ಸಂಕಷ್ಟದ ಬಗ್ಗೆ ಧ್ವನಿ ಎತ್ತಿದ್ದರೂ ಕೋವಿಡ್ ನ ಬಳಿಕ ಇತ್ತ ಕಡೆ ಯಾರೂ ತಿರುಗಿಯೂ ನೋಡಿರಲಿಲ್ಲ. ಕೋವಿಡ್ ಗೆ ಮುಂಚೆ 5 ಕಿ.ಮೀ ವ್ಯಾಪ್ತಿಯಲ್ಲಿ ವಾಸಿಸುವ ಕೇರಳ ಹಾಗೂ ಕರ್ನಾಟಕದ ಜನರಿಗೆ ಟೋಲ್ ಗೇಟಿನಲ್ಲಿ ಉಚಿತ ಪ್ರಯಾಣಕ್ಕೆ ಅನುಮತಿಸಲಾಗುತಿತ್ತು. ಆದರೆ ಕೋವಿಡ್ ಬಳಿಕ ಟೋಲ್ ಗೇಟಿನಲ್ಲಿ ಮಂಜೇಶ್ವರದವರಿಗೆ ಉಚಿತ ಪ್ರಯಾಣಕ್ಕೆ ಕಡಿವಾಣ ಹಾಕಿ ಕೇವಲ ತಲಪಾಡಿಯವರಿಗೆ ಮಾತ್ರ ಉಚಿತ ಪ್ರಯಾಣಕ್ಕೆ ಅನುಮತಿ ನೀಡಲಾಗಿತ್ತು.
ಈ ಬಗ್ಗೆ ಮಂಜೇಶ್ವರದ ಯಾವುದೇ ಪಕ್ಷದ ಜನಪ್ರತಿನಿಧಿಗಳು ಕೂಡಾ ಧ್ವನಿ ಎತ್ತದ ಹಿನ್ನೆಲೆಯಲ್ಲಿ ಈ ಬಗ್ಗೆ ಸ್ಥಳೀಯ ಪ್ರಯಾಣಿಕರು ಏನಾದರೂ ಈ ಬಗ್ಗೆ ವಿಚಾರಿಸಿದರೆ ಗೂಂಡಾಕ್ರಮಣ ನಡೆಯಿತಿತ್ತು. ಇದು ಸ್ಥಳೀಯರಲ್ಲಿ ಆತಂಕಕ್ಕೂ ಕಾರಣವಾಗಿತ್ತು. ಈ ಮಧ್ಯೆ ಎಸ್ ಡಿ ಪಿ ಐ ಕಾನೂನು ಹೋರಾಟಕ್ಕೆ ಮುಂದಾಗಿರುವುದು ಸ್ಥಳೀಯರಲ್ಲಿ ಭರವಸೆಯನ್ನು ಉಂಟು ಮಾಡಿದೆ.
ತಲಪಾಡಿ ಟೋಲ್ ಬೂತ್‍ನಲ್ಲಿ ಉಂಟಾಗಿರುವ ವಿವಿಧ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಂತೆ ಹಾಗೂ 5 ಕಿ.ಮೀ ವ್ಯಾಪ್ತಿಯಲ್ಲಿರುವವರಿಗೆ ಉಚಿತ ಪಾಸ್ ನೀಡುವಂತೆ ರಾಷ್ಟ್ರೀಯ ಹೆದ್ದಾರಿ (ಎನ್‍ಎಚ್‍ಎಐ) ಯೋಜನಾ ನಿರ್ದೇಶಕರ ಮಂಗಳೂರು ಕಚೇರಿಗೆ ಮನವಿ ಸಲ್ಲಿಸಿವುದರ ಜೊತೆಗೆ ಸ್ವಂಧನೆ ಇಲ್ಲವಾದರೆ ಟೋಲ್ ಗೇಟ್ ನಲ್ಲಿ ಪ್ರತಿಭಟನೆ ನಡೆಸಲಿರುವುದಾಗಿ ಎಚ್ಚರಿಕೆ ನೀಡಿದ್ದಾರೆ.