ಮುವಾಟ್ಟುಪುಳ: ನಿರ್ಮಲಾ ಕಾಲೇಜಿನಲ್ಲಿ ಪ್ರಾರ್ಥನಾ ಕೊಠಡಿಗೆ ಅವಕಾಶ ನೀಡಬೇಕೆಂಬ ಒಂದು ವಿಭಾಗದ ವಿದ್ಯಾರ್ಥಿಗಳ ಬೇಡಿಕೆ ಒಪ್ಪಲಾಗದು ಎಂದು ಪ್ರಾಂಶುಪಾಲ ಫಾದರ್ ಜಸ್ಟಿನ್ ಕೆ. ಕುರಿಯಾಕೋಸ್ ಹೇಳಿದರು. ಕ್ಯಾಂಪಸ್‌ನ ೭೨ ವರ್ಷಗಳ ಇತಿಹಾಸದಲ್ಲಿ ಈ ರೀತಿಯ ಬೇಡಿಕೆ ಇರಲಿಲ್ಲ. ಕಾಲೇಜು ಇಷ್ಟು ದಿನ ತಳೆದ ನಿಲುವನ್ನು ಮುಂದುವರಿಸುವುದಾಗಿ ತಿಳಿಸಿದರು.
ಪ್ರಾರ್ಥನಾ ಕೊಠಡಿಗೆ ಅನುಮತಿ ನೀಡಬೇಕು ಎಂದು ವಿದ್ಯಾರ್ಥಿಗಳ ಗುಂಪೊAದು ಪತ್ರ ಬರೆದಿತ್ತು. ಈ ಬೇಡಿಕೆ ಸ್ವೀಕಾರಾರ್ಹವಲ್ಲ. ತಕ್ಷಣದ ಪ್ರತಿಕ್ರಿಯೆ ಎಂಬAತೆ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿರಬಹುದು. ಮಕ್ಕಳ ವಿರುದ್ಧ ಶಿಸ್ತು ಕ್ರಮವನ್ನು ಪರಿಗಣಿಸಲು ಇದು ಸಮಯವಲ್ಲ. ಮಕ್ಕಳು ನಿರ್ಮಲಾ ಅವರ ಮಕ್ಕಳು. ತಮ್ಮ ತಪ್ಪುಗಳನ್ನು ಅರ್ಥ ಮಾಡಿಕೊಳ್ಳುತ್ತಾರೆ ಎಂದೂ ಸ್ಪಷ್ಟಪಡಿಸಿದರು.
ಇದೇ ವೇಳೆ ಮಹಲ್ ಸಮಿತಿಗಳು ವಿದ್ಯಾರ್ಥಿಗಳ ಪ್ರತಿಭಟನೆಗೆ ವಿಷಾದ ವ್ಯಕ್ತಪಡಿಸಿವೆ. ಮಕ್ಕಳು ಮಾಡಿದ್ದು ತಪ್ಪು ಎಂದು ಸಮಿತಿ ಪದಾಧಿಕಾರಿಗಳು ಹೇಳಿದ್ದಾರೆ.