ಬೆಂಗಳೂರು: ಭಾರತೀಯ ರೈಲ್ವೆಯು ಕೊಚ್ಚಿ-ಬೆಂಗಳೂರು ಮಾರ್ಗದಲ್ಲಿ ಭಾರೀ ಬೇಡಿಕೆಯ ತರುವಾಯ ವಂದೇಭಾರತ್ ವಿಶೇಷ ಸೇವೆಯನ್ನು ಘೋಷಿಸಿದೆ.
ವಾರದಲ್ಲಿ ಮೂರು ದಿನ ಸೇವೆ ಒದಗಿಸಲಾಗುವುದು. ಇದೇ ೩೧ರಂದು ಮೊದಲ ಸೇವೆ ಪ್ರಾರಂಭಗೊಳ್ಳಲಿದೆ.
ಮಧ್ಯಾಹ್ನ ೧೨.೫೦ಕ್ಕೆ ಎರ್ನಾಕುಳಂನಿಂದ ಹೊರಟು ರಾತ್ರಿ ೧೦ ಗಂಟೆಗೆ ಬೆಂಗಳೂರು ತಲುಪುವ ರೈಲು ಮರುದಿನ ಬೆಳಗ್ಗೆ ೫.೩೦ಕ್ಕೆ ಬೆಂಗಳೂರಿನಿಂದ ಹೊರಟು ಮಧ್ಯಾಹ್ನ ೨.೨೦ಕ್ಕೆ ಎರ್ನಾಕುಳಂ ತಲುಪಲಿದೆ. ಎರ್ನಾಕುಳಂನಿಂದ ಬೆಂಗಳೂರಿಗೆ ಬುಧವಾರ, ಶುಕ್ರವಾರ ಮತ್ತು ಭಾನುವಾರದಂದು ಮತ್ತು ಬೆಂಗಳೂರಿನಿಂದ ಕೊಚ್ಚಿಗೆ ಗುರುವಾರ, ಶನಿವಾರ ಮತ್ತು ಸೋಮವಾರದಂದು ಸೇವೆಗಳು ಕಾರ್ಯನಿರ್ವಹಿಸಲಿವೆ. ಸೇವೆಯನ್ನು ಖಾಯಂಗೊಳಿಸುವ ಸಾಧ್ಯತೆಯಿದೆ. ತ್ರಿಶೂರ್, ಪಾಲಕ್ಕಾಡ್, ಪೋತನೂರ್, ತಿರುಪುರ್, ಈರೋಡ್ ಮತ್ತು ಸೇಲಂನಲ್ಲಿ ನಿಲ್ದಾಣಗಳನ್ನು ಮಂಜೂರು ಮಾಡಲಾಗಿದೆ.
ಓಣಂ ಮೊದಲು ಕೇರಳಕ್ಕೆ ಮೂರನೇ ವಂದೇಭಾರತ್ ಸೇವೆಯನ್ನು ಅನುಮತಿಸಲಾಗುವುದು ಎಂದು ರೈಲ್ವೆ ಈ ಹಿಂದೆ ಹೇಳಿತ್ತು. ಹೊಸ ರೈಲು ಸೇವೆಯ ಪ್ರಾರಂಭವು ಬೆಂಗಳೂರಿನಲ್ಲಿ ಐಟಿ ವಲಯದಲ್ಲಿ ಕೆಲಸ ಮಾಡುವ ಅನೇಕ ಕೇರಳೀಯರಿಗೆಗೆ ಪ್ರಯೋಜನವಾಗಲಿದೆ.