ಕಾಸರಗೋಡು: ಕಾಂಞ0ಗಾಡ್ಞಮೇಲಂಗೋತ್‌ನಲ್ಲಿ ನಡೆದ ೯ ನೇ ಜಿಲ್ಲಾ ಯೋಗಾಸನ ಚಾಂಪಿಯನ್‌ಶಿಪ್‌ನಲ್ಲಿ ಕರಂದಕ್ಕಾಡ್‌ನ ಅಷ್ಟಾಂಗ ಯೋಗ ಸೆಂಟರ್ ಮೂರನೇ ಸ್ಥಾನ ಗಳಿಸಿದೆ. ಸಬ್‌ಜೂನಿಯರ್ ವಿಭಾಗದಲ್ಲಿ ಇಲ್ಲಿನ ವಿದ್ಯಾರ್ಥಿಗಳಾದ ಸಮೀಕ್ಷಾ ಕೆ. ತೃತೀಯ ಸ್ಥಾನ, ಧ್ಯಾನ್ ಜಿ. ದ್ವಿತೀಯ ಸ್ಥಾನ, ನಿಹಾರಿಕ ಎಸ್. ತೃತೀಯ ಸ್ಥಾನ, ವೈಭವ್ ಸಿ.ಕೆ. ತೃತೀಯ ಸ್ಥಾನ ಪಡೆದಿದ್ದಾರೆ.
ಜೂನಿಯರ್ ವಿಭಾಗದಲ್ಲಿ ರಾಮನಾಥ ಶೆಣೈ ದ್ವಿತೀಯ ಸ್ಥಾನ ಹಾಗು ಆರ್ಟಿಸ್ಟಿಕ್ ಸೋಲೊ ವಿಭಾಗದಲ್ಲಿ ಪ್ರಥಮ ಸ್ಥಾನ, ಅನ್ವಿತ್ ಶೆಟ್ಟಿ ಎ. ಜೂನಿಯರ್ ವಿಭಾಗದಲ್ಲಿ ಪ್ರಥಮ ಸ್ಥಾನ, ಆರ್ಟಿಸ್ಟಿಕ್ ಸೋಲೋದಲ್ಲಿ ದ್ವಿತೀಯ ಸ್ಥಾನ, ಆರ್ಟಿಸ್ಟಿಕ್ ಪೆಯರ್‌ನಲ್ಲಿ ಪ್ರಥಮ ಸ್ಥಾನಗಳಿಸಿದ್ದಾರೆ. ಇವರು ಕಲ್ಲಿಕೋಟೆಯಲ್ಲಿ ಜರಗುವ ರಾಜ್ಯ ಮಟ್ಟದ ಯೋಗಾಸನ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ಇವರಿಗೆ ಅಷ್ಟಾಂಗ ಯೋಗ ಸೆಂಟರ್‌ನ ಶಿಕ್ಷಕಿ ಮಮತಾ ಸುರೇಶ್ ತರಬೇತಿ ನೀಡಿದ್ದಾರೆ.