ಬದಿಯಡ್ಕ: ರೋಟರಿ ಕ್ಲಬ್ ಬದಿಯಡ್ಕದ ನೇತೃತ್ವದಲ್ಲಿ ಭಾರತೀಯ ವಾಯು ಸೇನೆಯ ನಿವೃತ್ತ ಸೇನಾಧಿಕಾರಿಗಳಾದ ಬಾಲಚಂದ್ರ ಕೇಕುಣ್ಣಾಯ ಅವರನ್ನು ಗೌರವಿಸುವ ಮೂಲಕ ಕಾರ್ಗಿಲ್ ವಿಜಯ್ ದಿವಸ್ ನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ನಿಕಟಪೂರ್ವ ರೋಟರಿ ಕಾರ್ಯದರ್ಶಿ ವೈ. ರಾಘವೇಂದ್ರಪ್ರಸಾದ್ ನಾಯಕ್ ನಿವೃತ್ತ ಸೇನಾಧಿಕಾರಿಗಳ ಪರಿಚಯ ಮಾಡಿದರು. ಕಾರ್ಯಕ್ರಮದಲ್ಲಿ ಬದಿಯಡ್ಕ ರೋಟರಿ ಕ್ಲಬ್ ನ ಅಧ್ಯಕ್ಷ ಬಿ.ಕೇಶವ ಪಾಟಾಳಿ ಅವರು ಸನ್ಮಾಸಿತರಿಗೆ ಶಾಲು ಹೊದಿಸಿ ಗೌರವಿಸಿ ಮಾತನಾಡಿದರು.
ಸನ್ಮಾನಿತರು ಕಾರ್ಗಿಲ್ ಯುದ್ಧದ ದಿನಗಳನ್ನು ಎಳೆಎಳೆಯಾಗಿ ತಿಳಿಸಿ ಮನಮುಟ್ಟುವಂತೆ ಯುದ್ಧದ ದಿನಗಳನ್ನು ನೆನೆದು ಮಾತನಾಡಿದರು..
ರೋಟರಿ ಕಾರ್ಯದರ್ಶಿ ರಮೇಶ್ ಆಳ್ವ ಅವರು ಫಲವಸ್ತುಗಳನ್ನು ನೀಡಿ ಗೌರವಿಸಿ ವಂದಿಸಿದರು. ಬದಿಯಡ್ಕ ರೋಟರಿ ಕ್ಲಬ್ ನ ರೊಟೇರಿಯನ್ ಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.