HEALTH TIPS

ಬೀಡಾಡಿ ದನಗಳ ಹಾವಳಿ ಬಗ್ಗೆ ಲೋಕಸಭೆಯಲ್ಲಿ ಪ್ರಸ್ತಾಪಿಸಿದ ಡಿಂಪಲ್ ಯಾದವ್

            ವದೆಹಲಿ: ಬೀಡಾಡಿ ದನಗಳ ಹಾವಳಿಯಿಂದ ಇಡೀ ದೇಶವೇ 'ಚೌಕಿದಾರ್'(ಕಾವಲುಗಾರ) ಆಗಿ ಮಾರ್ಪಟ್ಟಿದೆ ಎಂದು ಸಮಾಜವಾದಿ ಪಕ್ಷದ ಸಂಸದೆ ಡಿಂಪಲ್ ಯಾದವ್ ಸರ್ಕಾರದ ವಿರುದ್ಧ ಕಿಡಿಕಾರಿದರು.

             ಲೋಕಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆಯ ವೇಳೆ ಬೀಡಾಡಿ ದಳಗಳ ಸಮಸ್ಯೆ ಬಗ್ಗೆ ಪ್ರಸ್ತಾಪಿಸಿದ ಅವರು 'ಈ ಸಮಸ್ಯೆಯನ್ನು ಪರಿಹರಿಸಲು ಕೇಂದ್ರ ಬಜೆಟ್‌ನಲ್ಲಿ ಏನಾದರೂ ಅವಕಾಶವಿದೆಯೇ?' ಎಂದು ಕೇಳಿದರು.

             'ಜಾನುವಾರುಗಳ ಸಂಖ್ಯೆ ಹೆಚ್ಚುತ್ತಿರುವುದರಿಂದ ರಾತ್ರಿ ಹೊತ್ತು ನಿದ್ದೆ ಬಿಟ್ಟು ತಮ್ಮ ಹೊಲಗಳನ್ನು ಕಾಯುವ ಪರಿಸ್ಥಿತಿ ಬಂದಿದೆ. ಬೀಡಾಡಿ ದನಗಳ ಹಾವಳಿಯಿಂದ ಇಡೀ ದೇಶವೇ 'ಚೌಕಿದಾರ್' ಆಗಿ ಮಾರ್ಪಟ್ಟಿದೆ' ಎಂದು ಬಿಜೆಪಿಯ 2019ರ 'ಮೈ ಭಿ ಚೌಕಿದಾರ್'(ನಾನೂ ಕಾವಲುಗಾರ) ಪ್ರಚಾರವನ್ನು ಉಲ್ಲೇಖಿಸಿ ಪರೋಕ್ಷವಾಗಿ ಟೀಕಿಸಿದರು.

                 ಇದೇ ವೇಳೆ ರೈತರ ಆತ್ಮಹತ್ಯೆ ಬಗ್ಗೆ ಪ್ರಸ್ತಾಪಿಸಿದ ಡಿಂಪಲ್‌ ಯಾದವ್, 2020-2021ರಲ್ಲಿ ಮೂರು ವಿವಾದಿತ ಕೃಷಿ ಕಾಯ್ದೆಗಳನ್ನು ವಿರೋಧಿಸಿ 700 ರೈತರು ಪ್ರಾಣ ಕಳೆದುಕೊಂಡಿದ್ದಾರೆ. 2014 ರಿಂದ 2022 ರವರೆಗೆ 1 ಲಕ್ಷ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರೈತರ ವಿಮಾ ಯೋಜನೆಗಳಿಂದ ಎಷ್ಟು ಪ್ರಯೋಜನವಾಗಿದೆ? ಜಾನುವಾರು ಆರ್ಥಿಕತೆ ಕುಸಿಯುತ್ತಿದೆ. ಹಣದುಬ್ಬರ ಏರುತ್ತಿದೆ' ಎಂದು ಕಿಡಿಕಾರಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries