ದೇವಸ್ಥಾನಕ್ಕೆ ಭೇಟಿ ನೀಡುವಾಗ ವಿಧಿವಿಧಾನಗಳನ್ನು ಅನುಸರಿಸಬೇಕು ಎಂದು ಸಿಪಿಎಂ ಪ್ರಕಟಿಸಿರುವ ಹೊಸ ಪುಸ್ತಕದಲ್ಲಿ ಹೇಳಲಾಗಿದೆ. ತಿರುವಾಂಕೂರು ದೇವಸ್ವಂ ಮಂಡಳಿಯ ಮಾಜಿ ಅಧ್ಯಕ್ಷ ಹಾಗೂ ಸಿಪಿಎಂ ನಾಯಕ ಕೆ. ಅನಂತ ಗೋಪನ್ ಅವರ ‘ಓರ್ಮಗಳು ವಸಂತA’ ಪುಸ್ತಕದಲ್ಲಿ ಈ ಬಗ್ಗೆ ವಿವರಿಸಲಾಗಿದೆ.
"ದೇಗುಲವನ್ನು ಸಮೀಪಿಸುವಾಗ ಕರ ಮುಗಿಯುವುದು ವಾಡಿಕೆ. ಅರ್ಚಕರು ನೀಡುವ ತೀರ್ಥವನ್ನು ಗೌರವದಿಂದ ಸ್ವೀಕರಿಸಬೇಕು". ‘ಕಮ್ಯುನಿಸ್ಟರು ದೇವಸ್ವಂ ಮಂಡಳಿ ಅಧ್ಯಕ್ಷರಾದರೆ’ ಎಂಬ ಕೊನೆಯ ಅಧ್ಯಾಯದಲ್ಲಿ ನಂಬಿಕೆಯ ವಿಚಾರದಲ್ಲಿ ಅನಂತ ಗೋಪನ್ ಅವರ ನಿಲುವನ್ನು ನೀಡಲಾಗಿದೆ.
ಇದು ನನ್ನ ನಂಬಿಕೆ ಅಥವಾ ಅಪನಂಬಿಕೆಯ ವಿಷಯವಲ್ಲ. ಬದಲಿಗೆ, ಕೈಗೊಂಡ ಕಾರ್ಯಕ್ಕೆ ನ್ಯಾಯ ಸಲ್ಲಿಸಲು ಸಾಧ್ಯವಾಗುತ್ತದೆ. ಹಾಗಾಗಿ ಅಂದು ತಾನು ದೇವಸ್ವಂ ಮಂಡಳಿ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡಿದ್ದೆ ಎಂದೂ ಪುಸ್ತಕದಲ್ಲಿ ಹೇಳಲಾಗಿದೆ. ಅನಂತ ಗೋಪನ್ ಅವರ ಪುಸ್ತಕವನ್ನು ಸಿಪಿಎಂ ರಾಜ್ಯ ಕಾರ್ಯದರ್ಶಿ ಎಂ.ವಿ.ಗೋವಿAದನ್ ಬಿಡುಗಡೆ ಮಾಡಿದರು.