ಲಾವೋಸ್: ಮೂರು ದಿನಗಳ ಲಾವೋಸ್ ಪ್ರವಾಸದಲ್ಲಿರುವ ಭಾರತೀಯ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಅವರು ಇದೇ ಮೊದಲ ಬಾರಿಗೆ ಸಿದ್ಧಪಡಿಸಲಾಗಿರುವ ಅಯೋಧ್ಯೆ ಬಾಲರಾಮನ ಚಿತ್ರವಿರುವ ಅಂಚೆ ಚೀಟಿಯನ್ನು ಬಿಡುಗಡೆ ಮಾಡಿದ್ದಾರೆ.
ಆಗ್ನೇಯ ಏಷ್ಯಾ ರಾಷ್ಟ್ರಗಳಿಗೆ ಸಂಬಂಧಿಸಿದ ಸಭೆಯಲ್ಲಿ ಭಾಗವಹಿಸಿದ್ದ ಜೈಶಂಕರ್ ಅವರು, ಭಾರತ ಮತ್ತು ಲಾವೋಸ್ ನಡುವಿನ ಸಾಂಸ್ಕೃತಿಕ ಸಂಬಂಧದ ಭಾಗವಾಗಿ ಈ ಅಂಚೆ ಚೀಟಿಯನ್ನು ಅನಾವರಣಗೊಳಿಸಿದ್ದಾರೆ.
ಅದರ ಜತೆಗೆ ಲಾವೋಸ್‌ನ ಪುರಾತನ ರಾಜಧಾನಿ ಲುವಾಂಗ್ ಪ್ರಬಾಂಗ್‌ನಲ್ಲಿರುವ ಬುದ್ದನ ಚಿತ್ರವಿರುವ ಅಂಚೆ ಚೀಟಿಯನ್ನೂ ಬಿಡುಗಡೆಗೊಳಿಸಿದ್ದಾರೆ.ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಜೈಶಂಕರ್ ಅವರು, 'ಲಾವೋಸ್‌ನ ಉಪಪ್ರಧಾನಿ ಮತ್ತು ವಿದೇಶಾಂಗ ಸಚಿವ Saleumxay Kommasith ಅವರೊಂದಿಗೆ ಉತ್ತಮ ಮಾತುಕತೆ ನಡೆಸಲಾಯಿತು. ರಾಮಾಯಣ ಮತ್ತು ಬೌದ್ಧ ಧರ್ಮದ ಪರಸ್ಪರ ಸಾಂಸ್ಕೃತಿಕ ಪರಂಪರೆಯನ್ನು ಬಿಂಬಿಸುವ ಅಂಚೆ ಚೀಟಿಯನ್ನು ಪ್ರಾರಂಭಿಸಿದ್ದೇವೆ' ಎಂದು ಬರೆದುಕೊಂಡಿದ್ದಾರೆ.