ಕಾಸರಗೋಡು: ಸಹಕಾರ ಭಾರತಿ ಕಾಸರಗೋಡು ಜಿಲ್ಲಾ ಸಮಾವೇಶ ಹೊಸದುರ್ಗ ಸರ್ವೀಸ್ ಕೋ-ಆಪರೇಟಿವ್ ಬ್ಯಾಂಕ್ ಹಾಲ್‍ನಲ್ಲಿ ನಡೆಯಿತು. ಸಹಕಾರ ಭಾರತಿ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯ ನ್ಯಾಯವಾದಿ ಕರುಣಾಕರನ್ ನಂಬ್ಯಾರ್ ಉದ್ಘಾಟಿಸಿದರು. ಸಹಕಾರ ಭಾರತಿ ಅಧ್ಯಕ್ಷ ಗಣೇಶ್ ಪಾರೆಕಟ್ಟೆ ಎಸ್.ಬಿ. ಅಧ್ಯಕ್ಷತೆ ವಹಿಸಿದರು.
ರಾಜ್ಯ ಕಾರ್ಯದರ್ಶಿ ರಾಜಶೇಖರ್, ರಾಜ್ಯ ಉಪಾಧ್ಯಕ್ಷ ಐತಪ್ಪ ಮವ್ವಾರು, ರಾಜ್ಯ ಮಹಿಳಾ ಸೆಲ್ ಪ್ರಮುಖ್ ಶೋಭನಾ ಕಾಳ್ಯಂಗಾಡು, ಜಿಲ್ಲಾ ಉಪಾಧ್ಯಕ್ಷ ಪ್ರೇಮ್ ಕುಮಾರ್, ಬಾಬು ಪೂತಂಗಾನಂ, ಜಿಲ್ಲಾ ಕಾರ್ಯದರ್ಶಿಗಳಾದ ರೇವತಿ ಟೀಚರ್, ವೇಣುಗೋಪಾಲನ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಎಂ.ಕೆ.ಶಂಕರನಾರಾಯಣ ಮೊದಲಾದವರು ಮಾತನಾಡಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪದ್ಮರಾಜ್ ಪಟ್ಟಾಜೆ ಲೆಕ್ಕಪತ್ರ ಹಾಗು ವರದಿ ಮಂಡಿಸಿದರು. ಹೊಸದುರ್ಗ ತಾಲೂಕು ಕಾರ್ಯದರ್ಶಿ ಸುನಿಲ್ ಕುಮಾರ್ ಸ್ವಾಗತಿಸಿದರು.
ಸಭೆಯಲ್ಲಿ ಪದಾಧಿಕಾರಿಗಳನ್ನು ಆರಿಸಲಾಯಿತು. ಗಣೇಶ್ ಪಾರೆಕಟ್ಟೆ(ಅಧ್ಯಕ್ಷ), ಪ್ರೇಮ್ ಕುಮಾರ್ ಮಂಗಲ್ಪಾಡಿ, ರಾಧಾಕೃಷ್ಣ ಕರಿಂಬಿಲ(ಉಪಾಧ್ಯಕ್ಷ), ಪದ್ಮರಾಜ್ ಪಟ್ಟಾಜೆ(ಪ್ರಧಾನ ಕಾರ್ಯದರ್ಶಿ), ವೇಣುಗೋಪಾಲ್ ಕಾಸರಗೋಡು, ಶ್ರೀಲತಾ ಕಲ್ನಾಡ್(ಜೊತೆ ಕಾರ್ಯದರ್ಶಿಗಳು), ಚಂದ್ರಹಾಸ ಮಾಸ್ತರ್ ಕೂಡ್ಲು(ಕೋಶಾಧಿಕಾರಿ), ಶಂಕರನಾರಾಯಣ ಕಿದೂರು(ಸಂಘಟನಾ ಕಾರ್ಯದರ್ಶಿ), ಬಾಬು ಪೂತಂಗಾನಂ, ಸುಬ್ರಹ್ಮಣ್ಯ ಕಡಂಬಳಿತ್ತಾಯ, ಸದಾಶಿವ ಚೆಮ್ನಾಡ್, ಶ್ರೀಕಾಂತ್ ಬಿ.ಬಾಯಾರು, ಟಿ.ಆರ್.ಕೆ.ಪ್ರಸಾದ್ ಪೆರ್ಲ(ಸದಸ್ಯರು), ಸಂಜೀವ ಶೆಟ್ಟಿ ಮವ್ವಾರು(ಪಿಎಸಿಎಸ್ ಸೆಲ್ ಪ್ರಮುಖ್), ಸರ್ವೇಶ್ ಕುಮಾರ್ ಮಧೂರು(ಪಿಎಸಿಎಸ್ ಸಹಪ್ರಮುಖ್), ಜಯಂತಿ ಶೆಟ್ಟಿ(ಮಹಿಳಾ ಸೆಲ್ ಪ್ರಮುಖ್), ಶ್ಯಾಮಲಾ ಪತ್ತಡ್ಕ(ಮಹಿಳಾ ಸೆಲ್ ಸಹ ಪ್ರಮುಖ್), ರಾಧಾಕೃಷ್ಣ ಕಲ್ನಾಡ್(ಎಂಪೆÇ್ಲೀಯಿ ಸೆಲ್ ಪ್ರಮುಖ್), ಉದಯ ಕುಮಾರ್ ಬೆಳ್ಳೂರು(ಎಂಪೆÇ್ಲೀಯಿ ಸೆಲ್ ಸಹ ಪ್ರಮುಖ್), ಉದನೇಶವೀರ ನೀರ್ಚಾಲು(ಮಿಲ್ಕ್ ಸೆಲ್ ಪ್ರಮುಖ್), ವಿವೇಕಾನಂದ ಪಾಲಾರ್(ಮಿಲ್ಕ್ ಸೆಲ್ ಸಹ ಪ್ರಮುಖ್) ಆಯ್ಕೆಯಾದರು.