HEALTH TIPS

ದತ್ತಿನಿಧಿ ಪ್ರಶಸ್ತಿ ಪ್ರಧಾನ ಹಾಗೂ ಕನ್ನಡ ಸಂಸ್ಕೃತಿ ಉತ್ಸವ: ಸಾಮಾಜಿಕ ಬೆಳವಣಿಗೆಯಲ್ಲಿ ಪತ್ರಕರ್ತರ ಅಹರ್ನಿಶಿ ಪಾತ್ರ ಸ್ತುತ್ಯರ್ಹ: ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಅಭಿಮತ

             ಕುಂಬಳೆ: ಗಡಿನಾಡು ಕಾಸರಗೋಡಿನ ಕನ್ನಡಪರ ಕಾಳಜಿ ಅನನ್ಯವಾದುದು. ಕನ್ನಡ ಮಾಧ್ಯಮ ಕ್ಷೇತ್ರದ ಮೂಲಕ ಇಲ್ಲಿಯ ಕನ್ನಡಪರ ಹೋರಾಟ, ಭಾಷಾ ಸಾಮರಸ್ಯಗಳನ್ನು ಬೆಳವಣಿಗೆ ಮಹತ್ತರವಾಗಿ ದಾಖಲಾಗಿದೆ ಎಂದು ಕರ್ನಾಟಕ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ. ವಿ. ಪ್ರಭಾಕರ್ ಅ|ಭಿಪ್ರಾಯ ವ್ಯಕ್ತಪಡಿಸಿದರು.

       ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘ, ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ, ಕರ್ನಾಟಕ ಸರ್ಕಾರ ಕರ್ನಾಟಕ ಪ್ರವಾಸೋದ್ಯಮ ಇಲಾಖೆ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಬೆಂಗಳೂರು ಇವರ ಸಹಯೋಗದಲ್ಲಿ ಸೀತಾಂಗೋಳಿ ಸಮೀಪದ ಎಚ್.ಎ.ಎಲ್ ಬಳಿಯ ಅಲಯನ್ಸ್ ಕನ್ವೆನ್ಷನ್ ಸೆಂಟರ್‍ನಲ್ಲಿ ಶನಿವಾರ ನಡೆದ ದತ್ತಿನಿಧಿ ಪ್ರಶಸ್ತಿ ಪ್ರಧಾನ ಹಾಗೂ ಕನ್ನಡ ಸಂಸ್ಕೃತಿ ಉತ್ಸವವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು.

   ಹೆಚ್ಚಿನ ಆಕಾಂಕ್ಷೆಗಳಿಲ್ಲದೆ ಪತ್ರಕರ್ತರು ಸಮಾಜಿಕ ಕಳಕಳಿಯಿಂದ ನಡೆಸುತ್ತಿರುವ ಅಕ್ಷರ ಸೇವೆ ಅನನ್ಯವಾದುದು. ಈ ನಿಟ್ಟಿನಲ್ಲಿ ಕಾಸರಗೋಡಿನ ಕನ್ನಡಿಗರೊಂದಿಗೆ ಕರ್ನಾಟಕ ಸರ್ಕಾರ ಬೆಂಬಲವಾಗಿರುತ್ತದೆ ಎಂದರು.

    .  ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅಧ್ಯಕ್ಷತೆ ವಹಿಸಿ ಮಾತನಾಡಿ, ಗಡಿನಾಡಿನ ಪತ್ರಕರ್ತರ ಬಹುದಿನಗಳ ಬೇಡಿಕೆಗ|ಳನ್ನು ಶೀಘ್ರ ಪೂರೈಸಲಾಗುವುದು. ಉಚಿತ ಬಸ್ ಪಾಸ್ ಹಾಗೂ ಪತ್ರಕರ್ತರ ಕ್ಷೇಮಾಭಿವೃದ್ದಿ ನಿಧಿಗೆ ಪೂರಕ ನೆರವನ್ನು ಕೊಡಿಸುವ ನಿಟ್ಟಿನಲ್ಲಿ ಪ್ರಯತ್ನಗಳು ಪ್ರಗತಿಯಲ್ಲಿದೆ. ಪತ್ರಕರ್ತರ ಸಮಸ್ಯೆಗಳಿಗೆ ಧ್ವನಿಯಾಗಿ ಪತ್ರಕರ್ತರ ಸಂಘಟನೆ ರಾಜ್ಯಾದ್ಯಂತ ವಿವಿಧ ಕಾರ್ಯಯೋಜನೆಗಳೊಂದಿಗೆ ಯಶಸ್ವಿಯಾಗಿ ಮುನ್ನಡೆಯುತ್ತಿದೆ ಎಂದರು.


     ಈ ಸಂದರ್ಭ ಅಂತರಾಷ್ಟ್ರೀಯ ಆರ್ಯಭಟ ಪ್ರಶಸ್ತಿ ಪುರಸ್ಕೃತ ಉದ್ಯಮಿ ಕೆ. ಕೆ. ಶೆಟ್ಟಿ ಮತ್ತು  ಅಂತರಾಷ್ಟ್ರೀಯ ಖ್ಯಾತಿಯ ವಾಸ್ತುಶಿಲ್ಪಿ ರವೀಂದ್ರ ಕುಮಾರ್ ಬೆಂಗಳೂರು ಇವರಿಗೆ ನಾಗರಿಕ ಸನ್ಮಾನ ನೀಡಿ ಗೌರವಿಸಲಾಯಿತು. ಚೇತನ ಬೆಳಗೆರೆ ಅವರಿಗೆ ಅವ್ವಾ ಸೇವಾ ಟ್ರಸ್ಟ್ ಹುಬ್ಬಳ್ಳಿ ದತ್ತಿನಿಧಿ ಪ್ರಶಸ್ತಿ, ಅಶೋಕ್ ಚಂದರಗಿ ಅವರಿಗೆ ವೃತ್ತ ಹಿರಿಯ ಐಎಎಸ್ ಅಧಿಕಾರಿ ಡಾ. ಸೋಮಶೇಖರ್ ನೀಡುವ ದತ್ತಿನಿದಿ ಪ್ರಶಸ್ತಿ, ಬಿ. ರವೀಂದ್ರ ಶೆಟ್ಟಿ ಅವರಿಗೆ ಹವ್ವಾ ಹಸನ್ ಫೌಂಡೇಶನ್ ಕುದ್ಕೊಳಿ ಸಂಸ್ಥಾಪಕ ಅಬ್ದುಲ್ಲಾ ಮಾದುಮೂಲೆ ನೀಡುವ ದತ್ತಿನಿಧಿ ಪ್ರಶಸ್ತಿ, ಜಿ.ಸುಬ್ರಾಯ ಭಟ್ ಅನಿವಾಸಿ ಉದ್ಯಮಿ ಕಲಾಪೆÇೀಷಕ ಅವರಿಗೆ ಜೋಸೆಫ್ ಮಾಥಿಯಾಸ್ ನೀಡುವ ದತ್ತಿನಿ ಪ್ರಶಸ್ತಿ, ಇಬ್ರಾಹಿಂ  ಅವರಿಗೆ ಕೆ ವಿ ಆರ್ ಠ್ಯಾಗೋರ್ ಸ್ಮರಣಾರ್ಥ ಭಾಗ್ಯ ಠ್ಯಾಗೋರ್ ನೀಡುವ ದತ್ತಿ ನಿ ಪ್ರಶಸ್ತಿ, ವಾಲ್ಟರ್ ನಂದಳಿಕೆ ಅವರಿಗೆ ಶತಾಯುಷಿ ಸ್ವಾತಂತ್ರ್ಯ ಹೋರಾಟಗಾರ ಮಾಜಿ ಸಚಿವ ಭೀಮಣ್ಣ ಖಂಡ್ರೆ ಇವರ ಹೆಸರಿನ ದತ್ತಿನಿಧಿಪ್ರಶಸ್ತಿ, ಹೆಚ್ ಬಿ. ಮದನ್ ಗೌಡ ಅವರಿಗೆ ಡಾ. ಸುಧಾಕರ್ ಶೆಟ್ಟಿ ಪುಣೆ, ಹಿರಿಯ ಮಕ್ಕಳ ತಜ್ಞ ನೀಡುವ ದತ್ತಿನಿ ಪ್ರಶಸ್ತಿ, ಮುಂಬಯಿ ಪತ್ರಕರ್ತ ನವೀನ್ ಕೆ. ಅವರಿಗೆ ಮೊಹಮ್ಮದ್ ಇಬ್ರಾಹಿಂ ಪಾರ ಸ್ಮರಣಾರ್ಥ ನ್ಯಾಯವಾದಿ ಇಬ್ರಾಹಿಂ ಖಲೀಲ್ ಅರಿಮಲ ನೀಡುವ ದತ್ತಿನಿ ಪ್ರಶಸ್ತಿ, ನಂದಕುಮಾರ್ ಹೆಗಡೆ  ಅವರಿಗೆ ಮೊಗರೊಡಿ ಗೋಪಾಲಕೃಷ್ಣ ಮೇಲಾಂಟ ಸ್ಮರಣಾರ್ಥ ಹರ್ಷ ಮೇಲಾಂಟ ನೀಡುವ ದತ್ತಿನಿ ಪ್ರಶಸ್ತಿ, ಹೆಚ್ ಟಿ. ಅನಿಲ್ ಮಡಿಕೇರಿ ಅವರಿಗೆ ಉದ್ಯಮಿ ಸಮಾಜಸೇವಕ ಆಶ್ರಫ್ ಶಾ ಮಂತೂರು ನೀಡುವ ದತ್ತಿನಿ ಪ್ರಶಸ್ತಿ, ಸದಾನಂದ ಜೋಶಿ ಬೀದರ್ ಅವರಿಗೆ ನವಿಮುಂಬಯಿ ಧರ್ಮದರ್ಶಿಅಣ್ಣಿ ಸಿ.ಶೆಟ್ಟಿ ನೀಡುವ ದತ್ತಿನಿಧಿ ಪ್ರಶಸ್ತಿ, ದಿವಾಕರ ಬಿ. ಶೆಟ್ಟಿ ಕಾಪು ಅವರಿಗೆ ಕೆ.ಯು ಡಬ್ಲ್ಯೂ ಜೆ. ರಾಜ್ಯ ಸಮಿತಿ ನೀಡುವ ದತ್ತಿನಿ ಪ್ರಶಸ್ತಿ, ಬಿ.ಪಿ. ಶೇಣಿ ಅವರಿಗೆ ಕೆ.ಯು.ಡಬ್ಲ್ಯೂಜೆ ರಾಜ್ಯ ಸಮಿತಿ ನೀಡುವ ದತ್ತಿನಿ ಪ್ರಶಸ್ತಿಯನ್ನು ಪ್ರಧಾನಮಾಡಲಾಯಿತು.  

          ಸನ್ಮಾನಿತರನ್ನು ಹಿರಿಯ ಸಮಾಜ ಸೇವಕ ಮಂಜುನಾಥ ಆಳ್ವ ಮಡ್ವ, ಸಾಂಸ್ಕೃತಿಕ ಸಂಘಟಕ ಪೃಥ್ವಿರಾಜ್ ಶೆಟ್ಟಿ ಕುಂಬ್ಳೆ ಪರಿಚಯಿಸಿದರು. . ಈ ಸಂದರ್ಭದಲ್ಲಿ ಲೇಖಕರು, ನ್ಯಾಯವಾದಿ ಎಂ. ಎಸ್. ಥೋಮಸ್ ಡಿಸೋಜಾರವರ ಸೀತಾಂಗೋಳಿಯ 'ಗತವೈಭವ' ಹಾಗೂ ಕೇರಳ ರಾಜ್ಯದ ಏಕೈಕ ಕನ್ನಡ ಕಲಿಕಾ ಮಾರ್ಗದರ್ಶಿ ಇದರ ಸಂಪಾದಕರು ಕೆ. ರಾಮಚಂದ್ರ ಬಳ್ಳಾಲ್ ರಚಿಸಿದ 'ಜ್ಞಾನ ದೀವಿಗೆ' ಕೃತಿಯನ್ನು ಕರ್ನಾಟಕ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ. ವಿ. ಪ್ರಭಾಕರ್, ಹಾಗೂ ಮಾಜಿ ಶಾಸಕರು, ಕರ್ನಾಟಕ ಗಡಿ ಪ್ರದೇಶ  ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಸೋಮಣ್ಣ ಬೇವಿನ ಮರದ ಇವರು ಬಿಡುಗಡೆಗೊಳಿಸಿದರು. ಮುಖ್ಯ ಅತಿಥಿಗಳಾಗಿ ಮಂಜೇಶ್ವರ ಶಾಸಕ ಎ.ಕೆ.ಎಂ ಅಶ್ರಫ್, ಉದ್ಯಮಿ ಕೂಳೂರು ಕನ್ಯಾನ ಸದಾಶಿವ ಶೆಟ್ಟಿ, ಕುದುಕೋಳಿ ಹವ್ವಾಸನ್ ಫೌಂಡೇಶನ್ ಸಂಸ್ಥಾಪಕ ಅಬ್ದುಲ್ಲಾ ಮಾದುಮೂಲೆ ಉಪಸ್ಥಿತರಿದ್ದರು.  ಗೌರವ ಅತಿಥಿಗಳಾಗಿ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಸದಸ್ಯ ಭಗತ ರಾಜ್ ನಿಜಾಮಕರ್, ಡಾ. ಸಂಜೀವಕುಮಾರ್ ಅತಿವಾಲೆ, ಶಿವರೆಡ್ಡಿ ಖ್ಯಾಡೆದ್, ಹಿರಿಯ ಪತ್ರಕರ್ತರು, ಸಾಹಿತಿಗಳು ಡಾ. ಸದಾನಂದ ಪೆರ್ಲ, ಶೋಕ ಮಾತಾ ದೇವಾಲಯ ಬೇಳ ಪ್ರಧಾನ ಧÀರ್ಮಗುರು ಅತೀ ವಂ. ಸ್ವಾಮಿ ಫಾದರ್ ಸ್ಟ್ಯಾನಿ ಪಿರೇರಾ, ಜಿಲ್ಲಾ ಯೋಜನಾಕಾರಿ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಕಾಸರಗೋಡು ಮುಕೇಶ್, ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಕಾರ್ಯದರ್ಶಿ ಪ್ರಕಾಶ್ ಮತ್ತೀಹಳ್ಳಿ ಸಹಾಯಕ ನಿರ್ದೇಶಕರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ದಕ್ಷಿಣ ಕನ್ನಡ ಜಿಲ್ಲೆ, ರಾಜೇಶ್ ಜಿ., ಕ.ಸಾ.ಪ. ಕೇರಳ ಘಟಕ ಅಧ್ಯಕ್ಷ  ಡಾ. ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ, ಕಾಸರಗೋಡು ಸಾಮಾಜಿಕ ಧಾರ್ಮಿಕ ಮುಖಂಡ ಅರಿಬೈಲು ಗೋಪಾಲ್ ಶೆಟ್ಟಿ, ಕಾಸರಗೋಡು ಜಿಲ್ಲಾ ಪಂಚಾಯತಿ ಸದಸ್ಯ ಜಮೀಲಾ ಸಿದ್ದೀಕ್ ದಂಡೆಗೋಳಿ, ಕೆ.ಯು.ಡಬ್ಲ್ಯೂ ಜೆ ಬೆಂಗಳೂರು ಪ್ರಧಾನ ಕಾರ್ಯದರ್ಶಿ ಜೆ.ಸಿ ಲೋಕೇಶ್, ಬೆಂಗಳೂರು ಕೆ. ಯು. ಡಬ್ಲ್ಯೂ ಕೋಶಾಧಿಕಾರಿ ವಾಸುದೇವ ಹೊಳ್ಳ, ಕಾಸರಗೋಡು ಬ್ಲಾಕ್ ಪಂಚಾಯತಿ ಸದಸ್ಯ ಸುಕುಮಾರ ಕುದ್ರೆಪಾಡಿ, ಬದಿಯಡ್ಕ ಗ್ರಾಮ  ಪಂಚಾಯಿತಿ ಸದಸ್ಯ ಶಂಕರ ಡಿ., ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘ ಪ್ರಧಾನ ಕಾರ್ಯದರ್ಶಿ ಗಂಗಾಧರ ತೆಕ್ಕೇಮೂಲೆ ಉಪಸ್ಥಿತರಿದ್ದರು. ನ್ಯಾಯವಾದಿ ಥೋಮಸ್ ಡಿಸೋಜ ಸ್ವಾಗತಿಸಿ, ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘ ಅಧ್ಯಕ್ಷ ರವಿ ನಾಯ್ಕಾಪು ಪ್ರಾಸ್ಥಾವಿಕವಾಗಿ ಮಾತಾನಾಡಿ, ವಂದಿಸಿದರು. ಪ್ರೇರಣ ಭಾಷಣಕಾರ ರಫೀಕ್ ಮಾಸ್ತರ್ ಮಂಗಳೂರು ನಿರೂಪಿಸಿದರು. 

     ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ವಿವಿಧ ನೃತ್ಯ, ವಿಮಿಕ್ರಿ, ಗೀತಾ ಸಾಹಿತ್ಯ ಸಂಭ್ರಮ, ನಾಟ್ಯ ವೈವಿಧ್ಯಗಳು ಜರಗಿತು. ಪುರುಷೋತ್ತಮ ಪೆರ್ಲ, ಅಖಿಲೇಶ್ ನಗುಮುಗಂ, ಎ.ಆರ್.ಸುಬ್ಬಯ್ಯಕಟ್ಟೆ, ಶ್ರೀಕಾಂತ್ ನಾರಾಯಣ್ ನೆಟ್ಟಣಿಗೆ, ವಿ.ಜಿ.ಕಾಸರಗೋಡು ಮೊದಲಾದವರು ಉಪಸ್ಥಿತರಿದ್ದು ನೇತೃತ್ವ ನೀಡಿದ್ದರು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries