ಕುಂಬಳೆ: ಜ್ವರಬಾಧಿಸಿ ಕುಂಬಳೆಯ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆಯಲ್ಲಿರುವ ಯುವಕನ ಎರಡೂ ಕೈಗಳಲ್ಲಿ ಕೊಯ್ದ ಗಾಯಗಳುಂಟಾಗಿದ್ದು, ಕೈಗಳಿಗೆ ಬ್ಯಾಂಡೇಜ್ ಸುತ್ತಲಾಗಿದೆ.
ಕಿಳಿಂಗಾರು ಕಕ್ಕಳ ನಿವಾಸಿ ರಂಜಿತ್ ಎಂಬವರು ಜ್ವರ ಬಾಧಿಸಿ ಕುಂಬಳೆಯ ಆಸ್ಪತ್ರೆಯೊಂದಕ್ಕೆ ದಾಖಲಾಗಿದ್ದು, ನಂತರ ಡೆಂಘೆ ಎಂದು ಪತ್ತೆಹಚ್ಚಲಾಗಿತ್ತು. ಇದಕ್ಕಾಗಿ ಡ್ರಿಪ್ ನೀಡಲಾಗಿತ್ತು. ಡ್ರಿಪ್ ನೀಡಲು ಅಸಮರ್ಪಕವಾಗಿ ಸೂಜಿ ಚುಚ್ಚಿರುವುದು ಎರಡೂ ಕೈಗಗಳಿಗೆ ಗಾಯವುಂಟಾಗಲು ಕಾರಣವೆನ್ನಲಾಗಿದೆ. ಈ ಬಗ್ಗೆ ಪ್ರಶ್ನಿಸಲು ನಾಗರಿಕರು ಆಸ್ಪತ್ರೆಗೆ ತೆರಳುತ್ತಿದ್ದಂತೆ, ಕೈಗಳಿಗೆ ಉಂಟಾಗಿರುವ ಗಾಯಗಳಿಗೆ ಉಚಿತ ಚಿಕಿತ್ಸೆ ನೀಡುವುದಾಗಿ ಆಸ್ಪತ್ರೆ ಅಧಿಕಾರಿಗಳು ತಿಳಿಸಿದ್ದಾರೆ.