ಕೊಚ್ಚಿ: ಆಲುವಾದಲ್ಲಿ ಮೂವರು ಬಾಲಕಿಯರು ನಾಪತ್ತೆಯಾಗಿದ್ದಾರೆ. ಆಲುವಾದ ತೊಟ್ಟೈಕಟ್ಟುಕರದಲ್ಲಿ ಹಿಂದುಳಿದ ಹೆಣ್ಣು ಮಕ್ಕಳನ್ನು ರಕ್ಷಿಸುವ ಸಂಸ್ಥೆಯಿಂದ ಇಂದು ಮುಂಜಾನೆ ಬಾಲಕಿಯರು ನಾಪತ್ತೆಯಾಗಿದ್ದಾರೆ.
ಮಕ್ಕಳು 15, 16 ಮತ್ತು 18 ವರ್ಷ ವಯಸ್ಸಿನವರು ಎಂದು ಸಂಸ್ಥೆಯ ಅಧಿಕಾರಿಗಳು ದೂರು ನೀಡಿದಾಗ ಘಟನೆ ಬೆಳಕಿಗೆ ಬಂದಿದೆ. ಆಲುವಾ ಈಸ್ಟ್ ಪೋಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಪೋಲೀಸರು ಆ ಪ್ರದೇಶದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ.