ತಿರುವನಂತಪುರಂ: ಸಾಕಷ್ಟು ವಿವಾದಗಳು ಮತ್ತು ಟೀಕೆಗಳಿಗೆ ಗುರಿಯಾಗಿದ್ದ ‘ಕೇರಳೀಯಂ’ ಮರುಪ್ರದರ್ಶನಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ.
ಕಾರ್ಯಕ್ರಮವನ್ನು ಡಿಸೆಂಬರ್‍ನಲ್ಲಿ ಆಯೋಜಿಸಲಾಗುತ್ತಿದೆ. ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ನಡೆದ ಸಂಘಟನಾ ಸಮಿತಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಪ್ರಾಯೋಜಕತ್ವದ ಮೂಲಕ ವೆಚ್ಚ ಭರಿಸುವಂತೆ ಇಲಾಖೆಗಳಿಗೆ ಸೂಚಿಸಲಾಗಿದೆ. ಇದೇ ಸಂದರ್ಭದಲ್ಲಿ ರಾಜ್ಯ ಸಾಲದ ಸುಳಿಯಲ್ಲಿ ಮುಳುಗಿರುವ ಪರಿಸ್ಥಿತಿಯಲ್ಲಿ ಕೇರಳೀಯಂ ಮರು ಆಚರಣೆ ವಿರುದ್ಧ ಹಲವು ಕಡೆಯಿಂದ ಟೀಕೆ ವ್ಯಕ್ತವಾಗುತ್ತಿದೆ.
ಕಳೆದ ವರ್ಷ ನವೆಂಬರ್‍ನಲ್ಲಿ ಈ ಕಾರ್ಯಕ್ರಮ ನಡೆದಿತ್ತು. ಸರ್ಕಾರ ತನ್ನ ಪ್ರಾಯೋಜಕತ್ವದ ಅಂಕಿಅಂಶಗಳನ್ನು ಇನ್ನೂ ಬಿಡುಗಡೆ ಮಾಡಿಲ್ಲ. ಕಲೆ ಮತ್ತು ಸಂಸ್ಕøತಿ ಕ್ಷೇತ್ರದ ಪ್ರಮುಖರನ್ನು ಸಜ್ಜುಗೊಳಿಸಿ ಒಂದು ವಾರದ ಕಾರ್ಯಕ್ರಮಕ್ಕಾಗಿ ಸರ್ಕಾರ ಕೋಟಿಗಟ್ಟಲೆ ಖರ್ಚು ಮಾಡಿದೆ. ನಟಿ ಶೋಭನಾ ಅವರಿಂದ ಡ್ಯಾನ್ಸ್ ಶೋ, ಕೆ.ಎಸ್.ಚಿತ್ರಾ ಅವರಿಂದ ಗೀತ ಮೇಳ, ಶಾಸಕ ಮುಕೇಶ್ ಮತ್ತು ಜಿ.ಎಸ್.ಪ್ರದೀಪ್ ಅವರಿಂದ ವಿಶೇಷ ಕಾರ್ಯಕ್ರಮ, ಗಾಯಕ ಎಂ.ಜಯಚಂದ್ರನ್ ನೇತೃತ್ವದಲ್ಲಿ ಜಯಂ ಶೋ, ಸ್ಟೀಫನ್ ದೇವಸ್ಸಿ ಮತ್ತು ಮಟ್ಟನ್ನೂರು ಶಂಕರನ್‍ಕುಟ್ಟಿ ಅವರಿಂದ ಪ್ಯೂಷನ್ ಶೋ ಮುಂತಾದ ಕಾರ್ಯಕ್ರಮಗಳನ್ನು ಸರ್ಕಾರ ಪ್ರತಿನಿತ್ಯ ಲಕ್ಷಗಟ್ಟಲೆ ಖರ್ಚು ಮಾಡಿದೆ. ಸೆಂಟ್ರಲ್ ಸ್ಟೇಡಿಯಂನಲ್ಲಿ ನಡೆದ ಕಲಾತ್ಮಕ ಕಾರ್ಯಕ್ರಮಗಳಿಗೆ ಸರ್ಕಾರದಿಂದ 1 ಕೋಟಿ 55 ಲಕ್ಷ ರೂ.ವೆಚ್ಚ ಭರಿಸಲಾಗಿದೆ.
ಕಲ್ಯಾಣ ಪಿಂಚಣಿ ಸ್ಥಗಿತ ಮತ್ತು ಸರ್ಕಾರಿ ಅಧಿಕಾರಿಗಳ ವಿಳಂಬ ವೇತನದಿಂದ ಕೇರಳ ತೀವ್ರ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿದೆ ಎಂದು ರಾಜ್ಯ ಸರ್ಕಾರ ಒಪ್ಪಿಕೊಂಡಿದೆ. ಸಾಲದ ಸುಳಿಯಲ್ಲಿ ಸಿಲುಕಿದೆ ಎಂದು ಪದೇ ಪದೇ ಹೇಳುತ್ತಿದ್ದರೂ ಕೇರಳೀಯಂ ನ್ನು ಮತ್ತೆ ನಡೆಸಲು ಸರ್ಕಾರ ನಿರ್ಧರಿಸಿರುವುದು ಸಾರ್ವಜನಿಕ ಬೊಕ್ಕಸಕ್ಕೆ ಕನ್ನ ಹಾಕುವ ಕ್ರಮ ಎಂಬ ಆರೋಪಗಳು ಕೇಳಿ ಬರುತ್ತಿವೆ.