HEALTH TIPS

ಪೆರ್ಲ ನಾಲಂದ ಕಾಲೇಜಿನಲ್ಲಿ ಕಾರ್ಗಿಲ್ ವಿಜಯ ದಿನಾಚರಣೆ

             ಪೆರ್ಲ: ಪೆರ್ಲ ನಾಲಂದ ಕಾಲೇಜು ಎನ್ನೆಸ್ಸೆಸ್ ಘಟಕ ಸಂಖ್ಯೆ- ೪೯ ಆಶ್ರಯದಲ್ಲಿ ಕಾರ್ಗಿಲ್ ವಿಜಯ ದಿನ ಆಚರಿಸಲಾಯಿತು. ಅರ್ಥಶಾಸ್ತ್ರ ವಿಭಾಗದ ಪ್ರಾಧ್ಯಾಪಕಿ ಅನುಪಮ ಟಿ.ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿ, ೨೫ ವರ್ಷಗಳ ಹಿಂದೆ, ೧೯೯೯ರ ಜುಲೈ ೨೬ರಂದು ಭಾರತೀಯ ಸೈನ್ಯ ಪಾಕಿಸ್ತಾನಿ ನುಸುಳುಕೋರರನ್ನು ಸದೆಬಡಿಯುವ ಮೂಲಕ ತನ್ನ ಪರಾಕ್ರಮವನ್ನು ಇಡೀ ಜಗತ್ತಿಗೆ ಸಾರಿತ್ತು. ಈ ದಿನವು ಭಾರತದ ಇತಿಹಾಸದಲ್ಲಿ ದೇಶದ ಸೇನೆಯ ಶೌರ್ಯ ಮತ್ತು ಧೈರ್ಯದ ಕಥೆಯನ್ನು ನೆನಪಿಸುತ್ತದೆ. ಪಾಕಿಸ್ತಾನಿ ಸೇನೆಯು ಭಾರತದ ಭೂಪ್ರದೇಶದೊಳಗೆ ನುಗ್ಗಿ ಕಾರ್ಗಿಲ್‌ನ ಎತ್ತರದ ಸ್ಥಳಗಳನ್ನು ವಶಪಡಿಸಿಕೊಂಡಿತು. ಈ ಪ್ರದೇಶವನ್ನು ಭಾರತೀಯ ಸೈನಿಕರು ಆಪರೇಷನ್ ವಿಜಯ್ ನಡೆಸುವ ಮೂಲಕ ವಶಪಡಿಸಿಕೊಂಡರು. ಈ ದಿನವನ್ನು ದೇಶದಲ್ಲಿ ವಿಜಯ್ ದಿವಸ್ ಎಂದೇ ಆಚರಿಸಲಾಗುತ್ತಿದೆ ಎಂದು ತಿಳಿಸಿದರು. 

               ಎನ್ನೆಸ್ಸೆಸ್ ಯೋಜನಾಧಿಕಾರಿ ರೆಜೀಶ ಅಧ್ಯಕ್ಷತೆಯನ್ನು ವಹಿಸಿದ್ದರು. ಸ್ವಯಂಸೇವಕಿ ಶಾಲಿನಿ ಸ್ವಾಗತಿಸಿದರು. ಶ್ರೀಷ್ಮ ವಂದಿಸಿದರು.ಸ್ವಯಂ ಸೇವಕಿ ಖದೀಜತುಲ್ ಝಿನಾನ ನಿರೂಪಿಸಿದರು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries