ಮಂಜೇಶ್ವರ:ಕಾಸರಗೋಡಿನಲ್ಲಿ ಜನಿಸಿ, ಇಲ್ಲಿಯ ಕಲಿಕೆ ಪೂರ್ಣಗೊಳಿಸಿ ಅಧ್ಯಾಪಕರಾಗಿ ದುಡಿದಿದ್ದ ದಿ.ಕೆಟಿ.ಗಟ್ಟಿಯವರು ಕಾಸರಗೋಡಿನ ಹೆಮ್ಮೆಯ ಸಾಹಿತಿ ಎಂದು ಕಾಸರಗೋಡು ಸರ್ಕಾರಿ ಕಾಲೇಜಿನ ಪ್ರಾಧ್ಯಾಪಕ ಡಾ.ರತ್ನಾಕರ ಮಲ್ಲಮೂಲೆ ತಿಳಿಸಿದರು.
ಕನ್ನಡ ಅಭಿವೃದ್ದಿ ಪ್ರಾಧಿಕಾರದ ಕನ್ನಡ ಚಿಂತನ ಕಾರ್ಯಕ್ರಮದ ಭಾಗವಾಗಿ ಮಂಜೇಶ್ವರದ ಮಹಾಕವಿ ಮಂಜೇಶ್ವರ ಗೋವಿಂದ ಪೈ ಸ್ಮಾರಕ ಗ್ರಂಥಾಲಯದ ನೇತೃತ್ವದಲ್ಲಿ ಭಾನುವಾರ ನಡೆದ ‘ಕೆ.ಟಿ.ಗಟ್ಟಿ ಬದುಕು-ಬರಹ’ಕಾರ್ಯಕ್ರಮದಲಲಿ ಅವರು ವಿಶೇಷ ಉಪನ್ಯಾಸಗೈದು ಮಾತನಾಡಿದರು.
ಜಾತಿ ವ್ಯವಸ್ಥೆಯ ವಿರುದ್ದ ಸಾಹಿತ್ಯದ ಮೂಲಕ ಬಂಡೆದ್ದ ಕೆ.ಟಿ.ಗಟ್ಟಿಯವರು ಸಾಹಿತ್ಯದ ಎಲ್ಲಾ ಪ್ರಾಕಾರಗಳಲ್ಲೂ ಕೈಯಾಡಿಸಿದವರೆಂದು ಅವರು ಈ ಸಂದರ್ಭ ತಿಳಿಸಿದರು.
ಗ್ರಂಥಾಲಯ ಸಮಿತಿ ಅಧ್ಯಕ್ಷ ಎಂ.ಉಮೇಶ್ ಸಾಲ್ಯಾನ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭವನ್ನು ಮಂಜೇಶ್ವರ ಗ್ರಾ.ಪಂ.ಅಧ್ಯಕ್ಷೆ ಜೀನ್ ಲವೀನೊ ಮೊಂತೇರೊ ಉದ್ಘಾಟಿಸಿದರು. ಸಮುದಾಯ ಮಂಗಳೂರಿನ ವಾಸುದೇವ ಉಚ್ಚಿಲ್, ಕೇರಳ ಲೈಬ್ರರಿ ಕೌನ್ಸಿಲ್ ರಾಜ್ಯ ಸಮಿತಿ ಸದಸ್ಯ ಅಹಮ್ಮದ್ ಹುಸೈನ್ ಮಾಸ್ತರ್ ಶುಭಹಾರೈಸಿದರು. ಗ್ರಂಥಾಲಯ ಸಮಿತಿ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿಗಾರ್ ಸ್ವಾಗತಿಸಿ, ವಂದಿಸಿದರು.