ತಿರುವನಂತಪುರ: ಸ್ಥಳೀಯಾಡಳಿತ ಚುನಾವಣೆಯನ್ನು ಗುರಿಯಾಗಿಸಿಕೊಂಡು ಮಿಷನ್ ೨೦೨೫ ಕುರಿತು ಕಾಂಗ್ರೆಸ್‌ನಲ್ಲಿ ಭಿನ್ನಾಭಿಪ್ರಾಯ ತೀವ್ರವಾಗುತ್ತಿದೆ.
ಕೆಪಿಸಿಸಿ ಅಧ್ಯಕ್ಷ ಕೆ.ಸುಧಾಕರನ್ ವಿರುದ್ದ ವಿರೋಧ ಪಕ್ಷದ ನಾಯಕ ವಿಡಿ ಸತೀಶನ ಕಡೆಯವರು ತನ್ನ ಭಾವನೆಗಳನ್ನು ವ್ಯಕ್ತಪಡಿಸಿದ ನಂತರ, ವಿಡಿ ಸತೀಶನ್ ಅವರನ್ನು ಮಿಷನ್ ೨೦೨೫ ರ ನೇತೃತ್ವದಿಂದ ತೆಗೆದುಹಾಕಲಾಯಿತು. ಸತೀಶನ್ ಸ್ವತಃ ಹಿಂದೆ ನಿಂತರು. . ಹೈಕಮಾಂಡ್ ಮಧ್ಯಸ್ಥಿಕೆ ಇಲ್ಲದೆ ಮಿಷನ್ ೨೦೨೫ ರ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ ಎಂದು ಸತೀಶನ್ ತಿಳಿಸಿದ್ದಾರೆ. ಮಿಷನ್‌ನ ಕರ್ತವ್ಯಗಳ ಕುರಿತು ಹೊರಡಿಸಲಾದ ಸುತ್ತೋಲೆಯ ಟೀಕೆಗೆ ಸತೀಶನ್ ಎಐಸಿಸಿಗೆ ಪ್ರತಿಭಟನೆ ತಿಳಿಸಿದರು. ಸಮಸ್ಯೆ ಬಿಗಡಾಯಿಸುವ ಮುನ್ನ ಮನವೋಲಿಸುವ ಮೂಲಕ ಸಮಸ್ಯೆ ಬಗೆಹರಿಸಲು ಕಾಂಗ್ರೆಸ್ ನಾಯಕರು ಪ್ರಯತ್ನಿಸುತ್ತಿದ್ದಾರೆ.
ಸ್ಥಳೀಯಾಡಳಿತ ಚುನಾವಣೆಯ ಲಾಭ ಪಡೆಯಲು ಕಾಂಗ್ರೆಸ್ ನಿರ್ಧರಿಸಿದ ಮಿಷನ್ ೨೦೨೫, ವಿವಾದಗಳು ಉಲ್ಬಣಗೊಳ್ಳುತ್ತಿದ್ದಂತೆ ಪ್ರಾರಂಭದಲ್ಲೇ ವಿಫಲವಾಯಿತು. ಸದ್ಯ ಜಿಲ್ಲೆಗಳಲ್ಲಿ ಉಸ್ತುವಾರಿ ವಹಿಸಿರುವ ಕೆಪಿಸಿಸಿ ಪದಾಧಿಕಾರಿಗಳನ್ನು ಮುಂದಿಟ್ಟುಕೊAಡು ಹೊಸ ನಾಯಕರಿಗೆ ಮಿಷನ್ ಜವಾಬ್ದಾರಿ ನೀಡಿರುವುದು ಸತೀಶನ್ ವಿರುದ್ಧ ಒಂದು ವರ್ಗದ ಟೀಕೆಗೆ ಕಾರಣವಾಗಿದೆ. ವಯನಾಡಿನಲ್ಲಿ ನಡೆದ ನಾಯಕರ ಸಭೆಯಲ್ಲಿ ಎಐಸಿಸಿ ಸೂಚನೆಯಂತೆ ಸತೀಶನ್ ಅವರು ಕಾರ್ಯಾಚರಣೆಯ ಉಸ್ತುವಾರಿ ವಹಿಸಿದ್ದರು. ಆದರೂ ಟೀಕೆಯಿಂದಾಗಿ ಸತೀಶನ್ ಹಿಂದೆ ಸರಿದರು.
ಕೆಳಹಂತದವರು ಹತಾಶೆಯಲ್ಲಿ:
ಎಡಪಂಥೀಯ ಸರ್ಕಾರದ ವಿರುದ್ಧ ಜನರಲ್ಲಿ ಬಲವಾದ ಭಾವನೆ ಮೂಡಿದ್ದರೂ ಅದನ್ನು ಅರ್ಥ ಮಾಡಿಕೊಳ್ಳಲು ಕಾಂಗ್ರೆಸ್‌ಗೆ ಸಾಧ್ಯವಾಗದೆ ಒಗ್ಗಟ್ಟಾಗಿ ನಿಲ್ಲದೆ ಕೆಳಸ್ತರದಲ್ಲಿ ನಿರಾಸೆ ಮೂಡಿಸಿದೆ. ಮುಂದಿನ ದಿನಗಳಲ್ಲಿ ವಿವಾದ ತೀವ್ರಗೊಳ್ಳುವ ಸಾಧ್ಯತೆ ಇದೆ. ಆರಂಭದ ಚಟುವಟಿಕೆಗಳ ವೈಫಲ್ಯದ ನಂತರ ಸ್ಥಳೀಯಾಡಳಿತ ಚುನಾವಣೆಯಲ್ಲಿ ಪಕ್ಷದ ಸಾಧನೆ ಸುಧಾರಿಸುವುದಿಲ್ಲ ಎಂದು ಅಂದಾಜಿಸಲಾಗಿದೆ.
ಇದೇ ವೇಳೆ, ಲೋಕಸಭೆ ಚುನಾವಣೆಯಿಂದ ಸರ್ಕಾರದ ವಿರುದ್ಧ ಜನರ ಭಾವನೆ ಬಲವಾಗಿರುವುದು ಸ್ಪಷ್ಟವಾಗಿದ್ದು, ಅದನ್ನು ಕಾಂಗ್ರೆಸ್ ಅರ್ಥಮಾಡಿಕೊಂಡು ಒಗ್ಗಟ್ಟಾಗಿ ಮುಂದುವರಿಯಬೇಕು ಎಂದು ಮಾಜಿ ವಿಪಕ್ಷ ನಾಯಕ ರಮೇಶ್ ಚೆನ್ನಿತ್ತಲ ಹೇಳಿದರು. ಎಲ್ಲರೂ ಒಟ್ಟಿಗೆ ಜೊತೆಯಾಗಿರಬೇಕು ಎಂದು ತಾನು ಬಯಸುತ್ತೇನೆ. ಪಕ್ಷದೊಳಗೆ ಚರ್ಚೆ ಮಾಡುವುದು ಸರಿಯಲ್ಲ, ಸಮಸ್ಯೆ ಬಿಗಡಾಯಿಸುವುದು ಸರಿಯಲ್ಲ ಎಂದು ಚೆನ್ನಿತ್ತಲ ಸ್ಪಷ್ಟಪಡಿಸಿದರು.
ಇದೇ ವೇಳೆ ಪಕ್ಷದಲ್ಲಿ ಯಾವುದೇ ತಕರಾರು ಇಲ್ಲ ಎಂಬ ನಿಲುವಿನಲ್ಲಿ ಕೆ. ಮುರಳೀಧರನ್ ಇದ್ದಾರೆ. ತಪ್ಪುಗಳನ್ನು ಎತ್ತಿ ತೋರಿಸಲು ಸಭೆ ನಡೆಸಲಾಗುತ್ತಿದೆ ಎಂದರು. ಕೆಲವರು ನಡೆಯದ ಸಂಗತಿಗಳು ನಡೆದಿವೆ ಎನ್ನುತ್ತಾರೆ. ಇದು ಸರಿಯಾಗದು ಎಂದು ಮುರಳೀಧರನ್ ಹೇಳಿದರು.
ಯಾವ ಮನೆಯಲ್ಲಿ ಸಮಸ್ಯೆ ಇಲ್ಲ ಎಂದು ಸಂಸದ ಎಂ. ಕೆ. ರಾಘವನ್ ಸಮಸ್ಯೆಗೆ ಪ್ರತಿಕ್ರಿಯಿಸಿದರು. ಸದ್ಯ ಕೆಪಿಸಿಸಿಯಲ್ಲಿ ನಡೆಯುತ್ತಿರುವ ವಿವಾದದಲ್ಲಿ ಹೈಕಮಾಂಡ್ ಮಧ್ಯಸ್ಥಿಕೆ ವಹಿಸುವ ಅಗತ್ಯವಿಲ್ಲ. ಪಕ್ಷದಲ್ಲಿ ಹೊಗೆ, ಬೆಂಕಿ ಇಲ್ಲ, ಅದನ್ನು ಸುಡುವುದನ್ನು ಮಾಧ್ಯಮಗಳು ನಿಲ್ಲಿಸಬೇಕು ಎಂಬುದು ಸಂಸದರು ಪ್ರತಿಕ್ರಿಯಿಸಿದರು.