ತಿರುವನಂತಪುರಂ: ಸರ್ಕಾರಿ ಕಚೇರಿಗಳಲ್ಲಿ ಇನ್ನು ಯುಪಿಐ ಮೂಲಕ ಪಾವತಿ ಮಾಡಬಹುದು. ಈ ಕುರಿತು ಸರ್ಕಾರ ಆದೇಶ ಹೊರಡಿಸಿದೆ. ಗೂಗಲ್ ಪೇ ಮತ್ತು ಪೋನ್ ಪೇ ಯಂತಹ ಯುಪಿಐ ಚಾನಲ್‍ಗಳ ಮೂಲಕ ಸರ್ಕಾರಿ ಇಲಾಖೆಗಳು ಜನರಿಂದ ಹಣವನ್ನು ಪಡೆಯಬಹುದು ಎಂದು ಹಣಕಾಸು ಸಚಿವಾಲಯ ಪ್ರಕಟಿಸಿದೆ.
ಸರ್ಕಾರಿ ಕಚೇರಿಗಳಲ್ಲಿ ಕ್ಯೂ.ಆರ್ ಕೋಡ್ ಪ್ರದರ್ಶಿಸಲಾಗುವುದು. ಇಲಾಖೆಗಳು ಬಂದ ಹಣವನ್ನು ಖಜಾನೆಗೆ ತರುವ ವ್ಯವಸ್ಥೆ ಮಾಡಬೇಕು ಎಂದೂ ಸೂಚಿಸಲಾಗಿದೆ.