ಕಾಸರಗೋಡು: ಮೈಸೂರಿನಲ್ಲಿ ಜೂನ್ 18 ಮತ್ತು 20 ರಂದು ನಡೆದ ರಾಷ್ಟ್ರೀಯ ಯೋಗ ಒಲಿಂಪಿಯಾಡ್‍ನಲ್ಲಿ ಕಾಸರಗೋಡಿನ ಅಭಿಜ್ಞಾ ಬೆಳ್ಳಿಯ ಪದಕ ಪಡೆದುಕೊಂಡಿದ್ದಾಳೆ.
ಕೇರಳ ರಾಜ್ಯದಿಂದ ಎರ್ನಾಕುಳಂ ರೀಜಿಯನಲ್ ಪ್ರತಿನಿಧಿಯಾದ ಅಭಿಜ್ಞಾ, ಕಾಸರಗೋಡು ಕೇಂದ್ರೀಯ ವಿದ್ಯಾಲಯ ನಂಬ್ರ-1 ಸಿಪಿಸಿಆರ್‍ಐಯ 9ನೇ ತರಗತಿಯ ವಿದ್ಯಾರ್ಥಿನಿಯಾಗಿದ್ದಾಳೆ.
ಈಕೆ ಕಾಸರಗೋಡು ಯೋಗ ಫಾರ್ ಕಿಡ್ಸ್ ಕರಂದಕ್ಕಾಡು ಯೋಗ ತರಬೇತಿ ಕೇಂದ್ರದ ಯೋಗ ಶಿಕ್ಷಕಿ ತೇಜಕುಮಾರಿ ಮತ್ತು ಹರೀಶ್ ದಂಪತಿಯ ಪುತ್ರಿಯಾಗಿದ್ದಾಳೆ.