ತಿರುವನಂತಪುರಂ: ನೆಯ್ಯಾಟಿಂಗರದಲ್ಲಿರುವ ಪುನರ್ವಸತಿ ಕೇಂದ್ರದಲ್ಲಿ ಮತ್ತೊಬ್ಬ ವ್ಯಕ್ತಿಗೆ ಕಾಲರಾ ಇರುವುದು ಪತ್ತೆಯಾಗಿದೆ.
ರಾಜ್ಯದಲ್ಲಿ 24 ಗಂಟೆಗಳಲ್ಲಿ 129 ಡೆಂಗ್ಯೂ ಪ್ರಕರಣಗಳು ವರದಿಯಾಗಿವೆ. ಒಂದು ಡೆಂಗ್ಯೂ ಸಾವು ಮತ್ತು ಒಂದು ವೆಸ್ಟ್ ನೈಲ್ ಸಾವಿನ ಶಂಕೆ ಇದೆ. 36 ಮಂದಿಗೆ ಎಚ್1ಎನ್1 ಹಾಗೂ 14 ಮಂದಿ ಇಲಿ ಜ್ವರಕ್ಕೆ ತುತ್ತಾಗಿದ್ದಾರೆ. ಐದು ಮಲೇರಿಯಾ ಪ್ರಕರಣಗಳು ವರದಿಯಾಗಿವೆ.
ನಿಲಂಬೂರಿನಲ್ಲಿ ಒಬ್ಬರಿಗೆ ಮತ್ತು ಮಲಪ್ಪುರಂನ ಪೆÇನ್ನಾನಿಯಲ್ಲಿ ಮೂವರಿಗೆ ಮಲೇರಿಯ ಸೋಂಕು ದೃಢಪಟ್ಟಿದೆ. ಪೆÇನ್ನಾನಿಯಲ್ಲಿ ಮೂವರು ಮಹಿಳೆಯರಿಗೆ ಸೋಂಕು ತಗುಲಿದೆ. ಒಡಿಶಾ ಮೂಲದ ಅನ್ಯರಾಜ್ಯ ಕಾರ್ಮಿಕರೊಬ್ಬರು ನಿಲಂಬೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.