ತಿರುವನಂತಪುರಂ: ವಂದೇಭಾರತ್ ಕೊಚ್ಚುವೇಲಿಯಿಂದ ಮಂಗಳೂರಿಗೆ (06001) ಇಂದು(ಸೋಮವಾರ) ವಿಶೇಷ ಸಂಚಾರ ನಡೆಸಲಿದೆ.
ಕೊಚ್ಚುವೇಲಿಯಿಂದ ಬೆಳಗ್ಗೆ 10.45ಕ್ಕೆ ಹೊರಡುವ ರೈಲು ರಾತ್ರಿ 10 ಗಂಟೆಗೆ ಮಂಗಳೂರು ಸೆಂಟ್ರಲ್ ತಲುಪಲಿದೆ. ಪ್ರಯಾಣದ ಸಮಯ 11.15 ಗಂಟೆಗಳು. ಹೊಸ ಸಂಚಾರದಲ್ಲಿ ಎಂಟು ಕೋಚ್‍ಗಳಿವೆ.
ಪ್ರಯಾಣಿಕರ ದಟ್ಟಣೆಯನ್ನು ಪರಿಗಣಿಸಿ ಈ ಸೇವೆಯನ್ನು ನೀಡಲಾಗುತ್ತಿದೆ ಎಂದು ರೈಲ್ವೆ ತಿಳಿಸಿದೆ. ಕೊಲ್ಲಂ, ಕೊಟ್ಟಾಯಂ, ಎರ್ನಾಕುಳಂ ಟೌನ್, ತ್ರಿಶೂರ್, ಶೋರ್ನೂರ್, ತಿರೂರ್, ಕೋಝಿಕ್ಕೋಡ್, ಕಣ್ಣೂರು ಮತ್ತು ಕಾಸರಗೋಡುಗಳಲ್ಲಿ ನಿಲುಗಡೆ ಇರಲಿದೆ. ರೈಲ್ವೇ ರಿಸರ್ವೇಶನ್ ಕೂಡ ಆರಂಭವಾಗಿದೆ ಎಂದು ಮಾಹಿತಿ ನೀಡಿದರು.
ಕೊಚುವೇಲಿಯಿಂದ ಮಂಗಳೂರಿಗೆ ಎಸಿ ಚೇರ್ ಕಾರ್ ದರ 1470 ರೂ. ಅದೇ ಮಾರ್ಗದಲ್ಲಿ ಎಕ್ಸಿಕ್ಯೂಟಿವ್ ಚೇರ್ ಕಾರ್ ನಲ್ಲಿ 2970.
ವಂದೇ ಭಾರತ್ ವೇಳಾಪಟ್ಟಿ: (ಆಗಮನ / ನಿರ್ಗಮನ)
ಕೊಚುವೇಲಿ 10.45
ಕೊಲ್ಲಂ 11.40 - 11.43
ಕೊಟ್ಟಾಯಂ 12.55 – 12.58
ಎರ್ನಾಕುಲಂ ಟೌನ್ 14.02 – 14.05
ತ್ರಿಶೂರ್ 15.20 - 15.23
ಶೋರ್ನೂರ್ ಜಂಕ್ಷನ್ 16.15 - 16.20
ತಿರೂರ್ 16.50 - 16.52
ಕೋಝಿಕ್ಕೋಡ್ 17.32 - 17.35
ಕಣ್ಣೂರು 18.47 – 18.50
ಕಾಸರಗೋಡು 20.32 – 20.34
ಮಂಗಳೂರು ಸೆಂಟ್ರಲ್ 22.00.