ಕಾಸರಗೋಡು: ಮಾಜಿ ಮುಖ್ಯಮಂತ್ರಿ ಕೆ ಕರುಣಾಕರನ್ ಅವರು ಕೇರಳದಲ್ಲಿ ಕಮ್ಯುನಿಸ್ಟ್ ಆಳ್ವಿಕೆಯಿಂದ ರಾಜ್ಯದ ಸಾಮಾಜಿಕ-ಆರ್ಥಿಕ ಭದ್ರತೆಗೆ ಧಕ್ಕೆ ಉಂಟಾಗಲಿದೆ ಎಂಬುದನ್ನು ಹಲವು ವರ್ಷಗಳ ಹಿಂದೆಯೇ ಮನಗಂಡ ನಾಯಕರಾಗಿದ್ದರು ಎಂದು ಸಂಸದ ರಾಜಮೋಹನ್ ಉಣ್ಣಿತ್ತಾನ್ ತಿಳಿಸಿದ್ದಾರೆ.
ಅವರು ಮಾಜಿ ಮುಖ್ಯಮಂತ್ರಿ ಕೆ.ಕರುಣಾಕರನ್ ಅವರ 106ನೇ ಜನ್ಮದಿನಾಚರಣೆ ಅಂಗವಾಗಿ ಜಿಲ್ಲಾ ಕಾಂಗ್ರೆಸ್ ಸಮಿತಿ ನೇತೃತ್ವದಲ್ಲಿ ಕೆ.ಕರುಣಾಕರನ್ ಅವರ ಭಾವಚಿತ್ರಕ್ಕೆ ಪುಷ್ಪರ್ಚನೆ ನಡೆಸಿ ಉದ್ಘಾಟಿಸಿ ಮಾತನಾಡಿದರು.
ನಿರಂಕುಶ ಆಡಳಿತದ ಕನಸು ಕಟ್ಟಿಕೊಂಡಿರುವ ಕಮ್ಯುನಿಸ್ಟ್-ಮಕ್ಸಿಸ್ಟ್ ಪಕ್ಷದ ಧೋರಣೆಯಿಂದ ರಾಜ್ಯ ಇಂದು ದೀವಾಳಿಯತ್ತ ಸಾಗುವಂತಾಗಿದೆ. ಆಡಳಿತಗಾರನಿಗೆ ಜನರ ಮನಸ್ಸನ್ನು ಅಧ್ಯಯನ ಮಾಡುವ ಸಾಮಾನ್ಯ ಜ್ಞಾನ ಇರಬೇಕು. ಕೇರಳದ ಆಡಳಿತದ ಪ್ರಸಕ್ತ ಸನ್ನಿವೇಶಗಳಿಗೆ ಇದರ ಕೊರತೆಯೇ ಕಾರಣವಾಗಿದೆ. ಈ ನಿಟ್ಟಿನಲ್ಲಿ ಮಾಜಿ ಮುಖ್ಯಮಂತ್ರಿ ಕೆ ಕರುಣಾಕರನ್ ವಿಚಾರಧಾರೆ ಬಗ್ಗೆ ತಿಳಿದುಕೊಳ್ಳಲು ಅವರು ಸಿದ್ಧರಾಗಬೇಕು ಎಂದು ಉಣ್ಣಿತ್ತಾನ್ ತಿಳಿಸಿದರು.
ಡಿಸಿಸಿ ಅಧ್ಯಕ್ಷ ಪಿ.ಕೆ.ಫೈಸಲ್ ಅಧ್ಯಕ್ಷತೆ ವಹಿಸಿದ್ದರು. ಮುಖಂಡರಾದ ಕೆ.ನೀಲಕಂಠನ್, ಪಿ.ಎ.ಅಶ್ರಫಲಿ, ಎಂ.ಸಿ.ಪ್ರಭಾಕರನ್, ಕರುಣ್ ತಾಪ, ಪಿ.ವಿ.ಸುರೇಶ್, ಸಿ.ವಿ.ಜೇಮ್ಸ್, ಗೀತಾ ಕೃಷ್ಣನ್, ಧನ್ಯ ಸುರೇಶ್, ಎಂ.ರಾಜೀವ್ ನಂಬಿಯಾರ್, ಕೆ.ವಿ.ಭಕ್ತವತ್ಸಲನ್, ಕೆ.ಖಾಲಿದ್, ಎ. ವಾಸುದೇವನ್ ಜವಾದ್ ಪುತ್ತೂರು, ಬಿ.ಎ ಇಸ್ಮಾಯಿಲ್, ಶ್ಯಾಮ್ ಪ್ರಸಾದ್ ಮಾನ್ಯ, ಎಂ ಪುರುಷೋತ್ತಮನ್ ನಾಯರ್, ಎ ಶಾಹುಲ್‍ಹಮೀದ್ ುಪಸ್ಥಿತರಿದ್ದರು.