ಬಾಲೇಶ್ವರ: ಖಂಡಾಂತರ ಕ್ಷಿಪಣಿಯ 2ನೇ ಹಂತದ ಪರೀಕ್ಷಾರ್ಥ ಪ್ರಯೋಗ ಒಡಿಶಾದ ತೀರದಲ್ಲಿ ಬುಧವಾರ ಯಶಸ್ವಿಯಾಗಿ ನೆರವೇರಿದೆ ಎಂದು ಸರ್ಕಾರ ಹೇಳಿದೆ.
ಸ್ವದೇಶಿ ನಿರ್ಮಿತ ರಕ್ಷಣಾ ವ್ಯವಸ್ಥೆ ಇದಾಗಿದ್ದು, 5 ಸಾವಿರ ಕಿಲೋ ಮೀಟರ್ ಸಾಮರ್ಥ್ಯದ ಖಂಡಾಂತರ ಕ್ಷಿಪಣಿಯನ್ನು ಸಮರ್ಥವಾಗಿ ಎದುರಿಸುವ ಸಾಮರ್ಥ್ಯವನ್ನು ಇದು ಹೊಂದಿದೆ.
'ಸಂಜೆ 4.24ಕ್ಕೆ 2ನೇ ಹಂತದ ಎಡಿ ಎಂಡೋ ಅಟ್ಮಾಸ್ಪಿಯರಿಂಗ್ ಕ್ಷಿಪಣಿಯನ್ನು ಎಲ್‌ಸಿ-3 ಉಡ್ಡಯನ ಕೇಂದ್ರದಿಂದ ಹಾರಿಸಲಾಯಿತು. ಪರೀಕ್ಷಾ ಹಂತದ ಎಲ್ಲಾ ಹಂತಗಳಲ್ಲೂ ಯಶಸ್ವಿಯಾಯಿತು. ಬಹುದೂರದ ಸೆನ್ಸರ್‌ಗಳು, ಕಡಿಮೆ ಸುಪ್ತ ಸಂವಹನ ವ್ಯವಸ್ಥೆ ಹಾಗೂ ಅತ್ಯಾಧುನಿಕ ಇಂಟರ್‌ಸೆಪ್ಟರ್ ಕ್ಷಿಪಣಿಗಳು ಇವಾಗಿವೆ' ಎಂದು ಮಾಹಿತಿ ನೀಡಲಾಗಿದೆ.
ಶತ್ರು ಕ್ಷಿಪಣಿಯನ್ನು ಯಾವುದೇ ಹಂತದಲ್ಲಿ ಹೊಡೆದುರುಳಿಸುವ ಸಾಮರ್ಥ್ಯದ ರಕ್ಷಣಾ ವ್ಯವಸ್ಥೆಯನ್ನು ಡಿಆರ್‌ಡಿಒ ಮೂಲಕ ದೇಶೀಯವಾಗಿ ನಿರ್ಮಿಸಲಾಗಿದ್ದು, ಇದರ ಪರೀಕ್ಷೆ ಯಶಸ್ವಿಯಾಗಿದೆ ಎಂದು ಸರ್ಕಾರ ಹೇಳಿದೆ. ಈ ಯಶಸ್ವಿ ಪರೀಕ್ಷೆ ಕುರಿತು ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರು ಪ್ರತಿಕ್ರಿಯಿಸಿ, 'ಕ್ಷಿಪಣಿಯ ಸಾಮರ್ಥ್ಯದಲ್ಲಿ ಭಾರತ ತನ್ನ ಸಾಮರ್ಥ್ಯವನ್ನು ಮತ್ತೊಮ್ಮೆ ಸಾಬೀತು ಮಾಡಿದೆ' ಎಂದಿದ್ದಾರೆ.