ಇಂದು ವಿಶ್ವ ಮುಳುಗು ತಡೆ ದಿನ. ಶಿರೂರಿನಲ್ಲಿ ಮಣ್ಣು ಕುಸಿದು ಲಾರಿ ಸಮೇತ ಗಂಗಾವಳಿ ನದಿಯಲ್ಲಿ ನಾಪತ್ತೆಯಾದ ಅರ್ಜುನ್ ನನ್ನು ರಕ್ಷಿಸಲು ನೌಕಾಪಡೆ ಮುಂದಾಗಿರುವ ದಿನವೂ ಇಂದು ಎಂಬುದು ವಿಧಿಯ ಟ್ವಿಸ್ಟ್.
ಮತ್ತೊಂದು ನೋವಿನ ಸಂಗತಿ ಎಂದರೆ ವಿದೇಶಿ ಹಡಗಿನಿಂದ ಬಿದ್ದು ಸಮುದ್ರದಲ್ಲಿ ನಾಪತ್ತೆಯಾಗಿದ್ದ ಅಲಪ್ಪುಳ ಮೂಲದ ವಿಷ್ಣು ಮೋಹನ್ ಹುಡುಕಾಟ ಕೊನೆಗೊಳ್ಳಲಿದೆ. .
ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ಜುಲೈ ೨೫ ರಂದು ವಿಶ್ವ ಮುಳುಗು ತಡೆ ದಿನದ ಅಂಗವಾಗಿ ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿದ್ದು, ‘ಯಾರೂ ಮುಳುಗಬಾರದು, ರಕ್ಷಿಸೋಣ’ ಎಂಬ ಸಂದೇಶವನ್ನು ಸಾರುತ್ತದೆ. ರಾಜ್ಯ ಮಟ್ಟದಲ್ಲಿ ತಿರುವನಂತಪುರ ಜಿಲ್ಲೆಯ ರಾಷ್ಟ್ರೀಯ ಕೆಡೆಟ್ ಕಾರ್ಪ್ಸ್, ಭಾರತ್ ಸ್ಕೌಟ್ ಮತ್ತು ಗೈಡ್, ನೆಹರು ಯುವ ಕೇಂದ್ರ ಮತ್ತು ಸ್ಟೂಡೆಂಟ್ಸ್ ಪೋಲೀಸ್ ಕೆಡೆಟ್‌ನ ಮಕ್ಕಳು ಕಾರ್ಯಕ್ರಮದಲ್ಲಿ ಭಾಗವಹಿಸಿರುವರು.
ಮುಳುಗು ತಡೆ ದಿನಾಚರಣೆಗೆ ಸಂಬAಧಿಸಿದAತೆ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಆಶ್ರಯದಲ್ಲಿ ಜಿಲ್ಲಾ ಶಾಲಾ ಮಟ್ಟದಲ್ಲಿ ರೀಲ್ ಸ್ಪರ್ಧೆಯನ್ನು ಕೆಲವೆಡೆ ಆಯೋಜಿಸಲಾಗಿತ್ತು. ಸಾರ್ವಜನಿಕ ಜಾಗೃತಿ ಮೂಡಿಸುವ ಮತ್ತು ಪರಿಣಾಮಕಾರಿ ಸುರಕ್ಷತಾ ಕ್ರಮಗಳನ್ನು ಉತ್ತೇಜಿಸುವ ಮೂಲಕ, ಮುಳುಗಿ ಉಂಟಾಗುವ ಸಾವುಗಳನ್ನು ಗಣನೀಯವಾಗಿ ಕಡಮೆ ಮಾಡಬಹುದು ಮತ್ತು ಜೀವಗಳನ್ನು ಉಳಿಸಬಹುದು. ರಾಜ್ಯ ವಿಪತ್ತು ಸಂದೇಶ ಅಭಿಯಾನಕ್ಕೆ ಸಂಬAಧಿಸಿದAತೆ ಜಿಲ್ಲಾ ಶಾಲಾ ಮಟ್ಟದಲ್ಲಿ ವಿಡಿಯೋ ರೀಲ್ ಸ್ಪರ್ಧೆ ಏರ್ಪಡಿಸಲಾಗಿತ್ತು. ‘ಮಕ್ಕಳ ಮೂಲಕ ಮುಳುಗುವಿಕೆ ತಡೆಗಟ್ಟುವಿಕೆ ಜಾಗೃತಿ' ವಿಷಯವಾಗಿತ್ತು. ಹೆಚ್ಚಿನ ಮಾಹಿತಿಗಾಗಿ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ವೆಬ್‌ಸೈಟ್ ಮತ್ತು ಸಾಮಾಜಿಕ ಮಾಧ್ಯಮ ವೇದಿಕೆಗಳಿಗೆ ಭೇಟಿ ನೀಡಿ.