ತಿರುವನಂತಪುರಂ: ಜುಲೈ 19 (ನಾಳೆ) ತ್ರಿಶೂರ್ ಜಿಲ್ಲಾಧಿಕಾರಿಯಾಗಿ ಅರ್ಜುನ್ ಪಾಂಡಿಯನ್ ಅಧಿಕಾರ ಸ್ವೀಕರಿಸಲಿದ್ದಾರೆ. ತ್ರಿಶೂರ್ ಕಲೆಕ್ಟರ್ ವಿ.ಆರ್ ಕೃಷ್ಣ ತೇಜ ಆಂಧ್ರಪ್ರದೇಶಕ್ಕೆ ಅಂತಾರಾಜ್ಯ ಡೆಪ್ಯುಟೇಶನ್ ಮೇಲೆ ತೆರಳಿದ ಕಾರಣ ತೆರವಾದ ಸ್ಥಾನಕ್ಕೆ ಅರ್ಜುನ್ ನೇಮಕಗೊಂಡಿದ್ದಾರೆ. ಅರ್ಜುನ್ ಪಾಂಡಿಯನ್ ಪ್ರಸ್ತುತ ಮುಖ್ಯ ಕಾರ್ಯದರ್ಶಿ ಸಿಬ್ಬಂದಿ ಅಧಿಕಾರಿ ಮತ್ತು ಕಾರ್ಮಿಕ ಆಯುಕ್ತರಾಗಿದ್ದಾರೆ.
ಅರ್ಜುನ್ ಪಾಂಡಿಯನ್ ಇಡುಕ್ಕಿಯ ಏಲಪಾರ ಮೂಲದವರು. ತಿರುವನಂತಪುರಂ ಕಿಲಿಮನೂರು ಸರ್ಕಾರಿ ಶಾಲೆಯಲ್ಲಿ ಹೈಯರ್ ಸೆಕೆಂಡರಿ ಶಿಕ್ಷಣವನ್ನು ಪಡೆದಿದ್ದರು.
ನಂತರ ಕೊಲ್ಲಂನ ಟಿಕೆಎಂ ಇಂಜಿನಿಯರಿಂಗ್ ಕಾಲೇಜಿನಲ್ಲಿ ಬಿಟೆಕ್ ಪದವಿ ಮುಗಿಸಿ ಟಿಸಿಎಸ್ ಸೇರಿದರು. ನಂತರ 2016ರಲ್ಲಿ ನಾಗರಿಕ ಸೇವೆಗೆ ಸೇರ್ಪಡೆಗೊಂಡರು. 2019 ರಲ್ಲಿ ಒಟ್ಟಪಾಲಂ ಸಬ್ ಕಲೆಕ್ಟರ್ ಆಗಿಯೂ ಸೇವೆ ಸಲ್ಲಿಸಿದ್ದರು.
ಆಂಧ್ರದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರ ವಿಶೇಷ ಕರ್ತವ್ಯದ ಅಧಿಕಾರಿ ಹುದ್ದೆಗೆ ಕೃಷ್ಣ ತೇಜ ಡೆಪ್ಯುಟೇಶನ್ ಮೇಲೆ ತೆರಳಿರುವÀರು. ಡೆಪ್ಯುಟೇಶನ್ ಮೂರು ವರ್ಷಗಳವರೆಗೆ ಇರುತ್ತದೆ. ಕೃಷ್ಣ ತೇಜ ಅವರು ಕಡಮೆ ಅವಧಿಯಲ್ಲಿ ಜನಪ್ರಿಯ ಕಲೆಕ್ಟರ್ ಆಗಿ ಹೆಸರುಪಡೆದ ಯುವ ಅಧಿಕಾರಿ.