ಸಮರಸ ಚಿತ್ರಸುದ್ದಿ: ಕುಂಬಳೆ: ಇನ್‍ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ(ಐಸಿಎಐ) ನಡೆಸಿದ ಚಾರ್ಟರ್ಡ್ ಅಕೌಂಟೆಂಟ್(ಸಿಎ) ಅಂತಿಮ ಪರೀಕ್ಷೆಯಲ್ಲಿ ಕಾಸರಗೋಡಿನ ಆಕಾಶ್ ಪೈ ತೇರ್ಗಡೆಯಾಗಿದ್ದಾರೆ. ಇವರು ಮಂಗಳೂರಿನ ಪ್ರಸನ್ನ ಶೆಣೈ ಆ್ಯಂಡ್ ಕಂಪೆನಿಯಲ್ಲಿ ತಮ್ಮ ಆರ್ಟಿಕಲ್‍ಶಿಪ್ ಅನ್ನು ಪೂರೈಸಿದ್ದಾರೆ. ಇವರು ಕಾಸರಗೋಡಿನ ಪಿ.ರಾಮಚಂದ್ರ ಪೈ ಹಾಗು ಪ್ರತಿಭಾ ಪೈ ದಂಪತಿ ಪುತ್ರರಾಗಿದ್ದಾರೆ.