ಕ್ಯಾಲ್ಸಿಯಂ ಹಾಗೂ ಪ್ರೊಟೀನ್ ಭರಿತ ಹಾಲು ಹೆಚ್ಚಿನವರ ಮೆಚ್ಚಿನ ಪೇಯವಾಗಿದೆ. ಹಾಲು ಬಳಸಿ ಮಾಡಿದ ಚಹಾ ಕಾಫಿಗೂ ಪ್ರತ್ಯೇಕ ಬೇಡಿಕೆ ಇದೆ ಇನ್ನು ಮಕ್ಕಳಿಗೆ ಬಿಸಿ ಮಾಡಿದ ಹಾಲನ್ನೇ ನೀಡುತ್ತೇವೆ.
ಬೆಳೆಯುವ ಮಕ್ಕಳಿಗೆ ಹಾಲು ಮುಖ್ಯ ಎಂಬ ಅಂಶವನ್ನು ಪರಿಗಣಿಸಿ ಆದಷ್ಟು ಹಾಲನ್ನು ನೀಡಲಾಗುತ್ತದೆ.
ಆದರೆ ಮಕ್ಕಳಾಗಲೀ ಹಿರಿಯರಾಗಲೀ ಶುದ್ಧವಾದ ಹಸುವಿನ ಹಾಲನ್ನೇ ಸೇವಿಸಬೇಕೆಂದು ಹೇಳಲಾಗುತ್ತದೆ. ಆದರೆ ನಗರ ಪ್ರದೇಶಗಳಲ್ಲಿ ಹಸುವಿನ ಹಾಲು ದೊರೆಯುವುದು ತುಸು ಕಷ್ಟವೇ ಹಾಗಾಗಿ ಸಾಕಷ್ಟು ನಗರವಾಸಿಗಳು ಪ್ಯಾಕೆಟ್ ಹಾಲನ್ನೇ ಆಧರಿಸಿದ್ದಾರೆ.
ಹಾಲನ್ನು ಕುದಿಸುವ ಪ್ರಕ್ರಿಯೆ
ಪ್ಯಾಕೆಟ್ ಹಾಲನ್ನು ಪ್ಯಾಶ್ಚರೈಸೇಶನ್ ಎಂಬ ಪ್ರಕ್ರಿಯೆಗೆ ಒಳಪಡಿಸಿ ತಯಾರಿಸಲಾಗುತ್ತದೆ. ಈ ಪ್ರಕ್ರಿಯೆಯಲ್ಲಿ ಹಾಲನ್ನು 71 ಡಿಗ್ರಿಯಲ್ಲಿ ಬಿಸಿ ಮಾಡಲಾಗುತ್ತದೆ. ಇದರಿಂದ ಹಾನಿಕಾರಕ ಬ್ಯಾಕ್ಟೀರಿಯಾ ಹಾಗೂ ವೈರಸ್‌ಗಳಾದ ಅವಿಯನ್ ಇನ್‌ಫ್ಲುಯಂಜಾ ವೈರಸ್, ಮೈಕ್ರೊಬೈಟ್ರೀಯಾಮ್, ಇಕೊಲಿ, ಲಿಸ್ಟಿರಿಯಾ ಹೀಗೆ ನಾಶಪಡಿಸಲಾಗುತ್ತದೆ. ಹೀಗೆ ಕಾಯಿಸಿದ ಹಾಲು ಸೇವಿಸಲು ಸುರಕ್ಷಿತ ಎಂದಾಗಿದೆ. ಹಾಲನ್ನು ಈ ರೀತಿ ಪ್ಯಾಶ್ಚರೈಸೇಶನ್ ಹಾಗೂ ಪಾಶ್ಚರೀಕರಣ ಮಾಡುವುದು ಹಾಲನ್ನು ಒಂದು ಸುರಕ್ಷಿತ ಪೇಯವಾಗಿ ಬದಲಾಯಿಸುತ್ತದೆ.
ಹಾಲನ್ನು ಹೆಚ್ಚು ಕುದಿಸಬಾರದು ಏಕೆ?
ಇನ್ನು ಮನೆಯಲ್ಲಿ ಹಾಲನ್ನು ಬಳಸುವಾಗ ಈ ಹಾಲನ್ನು ಸರಿಯಾದ ತಾಪಮಾನದಲ್ಲಿ ಸಂಗ್ರಹಿಸಲಾಗದೇ ಇದ್ದರೆ ಇದನ್ನು ಸರಿಯಾಗಿ ಕಾಯಿಸುವುದು ಅಗತ್ಯವಾಗಿದೆ ಇಲ್ಲದಿದ್ದರೆ ಹಾನಿಕಾರಕ ಬ್ಯಾಕ್ಟೀರಿಯಾ ಹಾಗೂ ವೈರಸ್‌ಗಳು ಬೆಳವಣಿಗೆಯಾಗುವ ಸಾಧ್ಯತೆ ಇರುತ್ತದೆ. ಹಾಲನ್ನು ಕುದಿಸುವುದು ಅದರಲ್ಲಿರುವ ಮಧ್ಯಮ ಹಾಗೂ ಸಣ್ಣ ಫ್ಯಾಟಿ ಆಸಿಡ್‌ಗಳ ಹಾಜರಾತಿಯನ್ನು ಹೆಚ್ಚಿಸುತ್ತದೆ. ಈ ಫ್ಯಾಟಿ ಆಮ್ಲ ಅಥವಾ ಆಸಿಡ್ ಹಾಲಿನಿಂದ ಅಜೀರ್ಣ ಹಾಗೂ ಅಲರ್ಜಿ ಸಮಸ್ಯೆಯುಳ್ಳವರಿಗೆ ಪ್ರಯೋಜನಕಾರಿಯಾಗಿದೆ.
ವಿಟಮಿನ್ ಹಾಗೂ ಪ್ರೊಟೀನ್‌ಗಳ ನಷ್ಟ
ಇನ್ನು ಕೆಲವೊಂದು ಅಧ್ಯಯನಗಳ ಪ್ರಕಾರ ಹಾಲನ್ನು 100 ಅಥವಾ ಅದಕ್ಕಿಂತ ಹೆಚ್ಚಿನ ಡಿಗ್ರಿಯಲ್ಲಿ ಪ್ಯಾಶ್ಚರೈಸ್ ಮಾಡುವುದರಿಂದ ಹಾಲಿನಲ್ಲಿರುವ ಕೆಲವೊಂದು ವಿಟಮಿನ್ ಹಾಗೂ ಮಿನರಲ್‌ಗಳು ನಷ್ಟವಾಗುತ್ತದೆ ಎಂದಾಗಿದೆ. ಬಿ2, ಬಿ3, ಬಿ6 ಹಾಗೂ ಫೋಲಿಕ್ ಆಮ್ಲ ನಷ್ಟಗೊಳ್ಳಬಹುದು. ಅಂತೆಯೇ ಸಾಕಷ್ಟು ಸಮಯದವರೆಗೆ ಹಾಲನ್ನು ಕುದಿಸುವುದು ವಿಟಮಿನ್ ಡಿ ಅಂಶವನ್ನು ಕಡಿಮೆ ಮಾಡುತ್ತದೆ. ಇದು ದೇಹದಲ್ಲಿರುವ ಕ್ಯಾಲ್ಶೀಯಂ ಹೀರುವಿಕೆಗೆ ಋಣಾತ್ಮಕ ಪರಿಣಾಮ ಬೀರುತ್ತದೆ. ನ್ಯೂಟ್ರಿಯಂಟ್ ನಷ್ಟವನ್ನು ಕಡಿಮೆ ಮಾಡಲು, ಹಾಲನ್ನು ನಾಲ್ಕರಿಂದ ಐದು ನಿಮಿಷ ಕುದಿಸಿದರೆ ಸಾಕು.