ಮನೆಯಲ್ಲಿ ಚಿಕ್ಕ ಮಕ್ಕಳಿದ್ದರೆ ಅವರ ಮೇಲೆ ಎಷ್ಟೇ ಗಮವಿಟ್ಟರು ಸಾಲದು. ಏಕೆಂದರೆ ಮಕ್ಕಳು ಬಹುಬೇಗ ಅನಾರೋಗ್ಯಕ್ಕೆ ಒಳಗಾಗುತ್ತಾರೆ. ಹೀಗಾಗಿ ಅವರ ಮೇಲೆ ಮತ್ತಷ್ಟು ಗಮನವಿಡಬೇಕಾದ ಅನಿವಾರ್ಯತೆ ಇದ್ದೇ ಇರುತ್ತದೆ. ಮಕ್ಕಳು ಒಂದು ಹಂತದ ವರೆಗೆ ಬೆಳವಣಿಗೆ ಆಗುವವರೆಗೂ ಅವರ ಆರೋಗ್ಯದ ಮೇಲೆ ಒಂದು ಕಣ್ಣಿಡಲೇಬೇಕಾಗುತ್ತದೆ.
ಆದರೆ ಸಣ್ಣ ಮಕ್ಕಳು ಮನೆಯಲ್ಲಿ ಇದ್ದರೆ ಅವರು ಮಲಗುವುದರಿಂದ ಹಿಡಿದು ಊಟ, ತಿಂಡಿ ಮೇಲೂ ಗಮನವಿಡಬೇಕಾಗುತ್ತದೆ. ಆದರೆ ನಿಮ್ಮ ಮನೆಯಲ್ಲಿ ಸಣ್ಣ ಮಕ್ಕಳಿದ್ದರೆ ಅವರು ಬಾಯಿಯಲ್ಲಿ ಉಸಿರಾಡುವ ಅಭ್ಯಾಸ ಬೆಳೆಸಿಕೊಂಡಿರುತ್ತಾರೆ. ಇದೊಂದು ಒಂದು ಸಮಸ್ಯೆಯಾಗಿ ನಿಮಗೆ ಕಾಡಬಹುದು.
ಚಿಕ್ಕ ಮಕ್ಕಳು ಮಲಗುವಾಗ ಬಾಯಲ್ಲಿ ಉಸಿರಾಟ ಪ್ರಕ್ರಿಯೆ ನಡೆಸುತ್ತಾರೆ. ಇದು ಮುಂದೆ ಸಮಸ್ಯೆ ತರಬಹುದು. ಉಸಿರಾಟ ಮೂಗಿನಲ್ಲಿ ಅಥವಾ ಬಾಯಿಯಲ್ಲಿ ಮಾಡಿದ್ರೂ ಒಂದೇ ಎಂದು ಉದಾಸೀನ ಮಾಡಬಹುದು. ಇಲ್ಲವೆ ಮಗು ಮುಂದೆ ಕಲಿತುಕೊಳ್ಳುತ್ತದೆ ಎಂದು ಭಾವಿಸಬೇಡಿ, ಇದು ಅನಾರೋಗ್ಯ ಸಹ ತರಬಹುದು.
ಮಗು ಮಲಗಿ ನಿದ್ರೆಯಲ್ಲಿದ್ದಾಗ ಬಾಯಿಯ ಮೂಲಕ ಉಸಿರಾಟ ಕ್ರಿಯೆ ನಡೆಸುದ್ದರೆ ಈ ಅಭ್ಯಾಸ ಆದಷ್ಟು ಬೇಗ ಸರಿ ಹೋಗುವಂತೆ ಮಾಡಬೇಕು. ಹಾಗಾದ್ರೆ ಮಕ್ಕಳು ಬಾಯಿಯ ಮೂಲಕ ಉಸಿರಾಡುತ್ತಿದ್ದರೆ ಏನಾಗಲಿದೆ? ಇದರಿಂದ ಮಕ್ಕಳಿಗೆ ಆಗುವ ಸಮಸ್ಯೆ ಏನು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಮಕ್ಕಳಲ್ಲಿ ಮೂಗಿನ ಹಿಂದೆ ಮಾಂಸ ಬೆಳಯುವುದು
ಚಿಕ್ಕ ಮಕ್ಕಳಲ್ಲಿ ಮೂಗಿನ ಹಿಂಬದಿಯಲ್ಲಿ ಮಾಂಸ ಬೆಳೆಯುತ್ತದೆ. ಒಂದು ಅಡಿನಾಡ್ ಮತ್ತೊಂದು ಟಾನ್ಸಿಲ್ ಎಂದು ಕರೆಯಲಾಗುತ್ತದೆ. ಈ ಮಾಂಸಗಳು ಮೂಗಿನಿಂದ ಕಲ್ಮಶ ದೇಹ ಸೇರದಂತೆ ತಡೆಯುತ್ತವೆ. ಆದರೆ ಯಾವುದಾದರು ಸೋಂಕು ಕಾಣಿಸಿಕೊಂಡರೆ ಈ ಮಾಂಸ ಖಂಡಗಳು ದಪ್ಪದಾಗುತ್ತವೆ. ಈ ಅಡಿನಾಡ್ ಮಾಂಸ ದಪ್ಪವಾಗಿ ಉಸಿರಾಟ ಸಮಸ್ಯೆಗೆ ಅಡ್ಡಿಯಾಗುತ್ತದೆ, ಈ ವೇಳೆ ಮೂಗು ಕಟ್ಟಿದ ಸ್ಥಿತಿ ಎದುರಾಗಿ ಬಾಯಿಯಲ್ಲಿ ಉಸಿರಾಟ ನಡೆಸುತ್ತಾರೆ.
ಈ ಮಾಂಸ ಖಂಡ ದಪ್ಪವಾಗಲು ಕಾರಣವೇನು?
ಮಕ್ಕಳಲ್ಲಿ ಪದೇ ಪದೇ ಶೀತ ಕಾಣಿಸಿಕೊಳ್ಳುವುದರಿಂದ ಈ ಮಾಂಶ ದಪ್ಪವಾಗುತ್ತಾ ಹೋಗುತ್ತದೆ. ಇದರಿಂದ ಮಕ್ಕಳಲ್ಲಿ ಮೂಗು ಕಟ್ಟುವಿಕೆ ಯಾವಾಗಲು ಕಾಣಿಸಿಕೊಳ್ಳುತ್ತದೆ. ಯಾವಾಗಲೂ ಫ್ರಿಡ್ಜ್‌ನಲ್ಲಿ ಆಹಾರ ಸೇವನೆ ಮಾಡುವುದು ಸಹ ಈ ರೀತಿಯ ಸಮಸ್ಯೆಗೆ ದಾರಿಯಾಗುತ್ತದೆ. ಜೊತೆಗೆ ಅತಿಯಾದ ಫ್ಯಾನ್ ಹಾಗೂ ಎಸಿಯಲ್ಲಿ ಮಗುವನ್ನು ಮಲಗಿಸುವುದರಿಂದಲೂ ಈ ರೀತಿಯ ಸಮಸ್ಯೆಗೆ ಒಳಗಾಗುತ್ತವೆ.
ಕಿವಿ ನೋವಿಗೂ ಇದು ಕಾರಣವಾಗಲಿದೆ
ಅಡಿನಾಡ್ ಚರ್ಮ ದಪ್ಪವಾಗುತ್ತಾ ಹೋಗುವುದರಿಂದ ಅದು ಕಿವಿಯಲ್ಲಿ ನೀರು ತುಂಬಿಕೊಳ್ಳುವುದು ಅಥವಾ ಕಿವಿ ನೋವಿಗೆ ಕಾರಣವಾಗುತ್ತದೆ. ಕಿವಿರು ಕಟ್ಟುವಿಕೆಯಿಂದ ಕಿವಿ ಕೇಳಿಸದೇ ಇರುವುದು ಸಹ ಕಾಣಬಹುದು. ಪದೇ ಪದೇ ಸೋಂಕಿಗೆ ಒಳಗಾಗುವುದರಿಂದ ಈ ಮಾಂಸ ಮತ್ತಷ್ಟು ಬೆಳೆದು ಶಸ್ತ್ರ ಚಿಕಿತ್ಸೆ ಮಾಡಬೇಕಾದ ಅನಿವಾರ್ಯತೆ ಎದುರಾಗುತ್ತದೆ.
ಚಿಕಿತ್ಸೆ ಏನು?
qಮಕ್ಕಳು ಬಾಯಿಯಿಂದ ಉಸಿರಾಡುವುದು ಅಥವಾ ಪದೇ ಪದೇ ಮೂಗು ಕಟ್ಟುವುದು, ಗೊರಕೆ ಹೊಡೆಯುವುದು ಮಾಡುತ್ತಿದ್ದರೆ ನಿರ್ಲಕ್ಷಿಸಬಾರದು. ಅವರಿಗೆ ಮೆಡಿಕಲ್ ಔಷಧಿಗಳ ನೀಡದೆ ತಕ್ಷಣ ವೈದ್ಯರ ಸಂಪರ್ಕಿಸಬೇಕು. ಆರಂಭದಲ್ಲೇ ಶಸ್ತ್ರ ಚಿಕಿತ್ಸೆ ನೆರವೇರಿಸಿ ಈ ಮಾಂಸ ತೆಗೆದು ಹಾಕಿದರೆ ಉಸಿರಾಟ ಸಮಸ್ಯೆ ಎದುರಾಗುವುದಿಲ್ಲ. ವೈದ್ಯರು ಆರಂಭದಲ್ಲಿ ಎಕ್ಸ್ ರೇ ಮೂಲಕ ಈ ಮಾಂಸ ಎಷ್ಟು ದೊಡ್ಡದಾಗಿ ಬೆಳೆದಿದೆ ಎಂಬುದರ ಆಧಾರದ ಮೇಲೆ ಶಸ್ತ್ರ ಚಿಕಿತ್ಸೆಯ ಅಗತ್ಯತೆ ಕುರಿತು ತಿಳಿಸುತ್ತಾರೆ. ಆದರೆ ಶೀತ, ಕೆಮ್ಮಿನಂತೆ ಇದಕ್ಕೆ ಮನೆ ಔಷಧಿ, ಮೆಡಿಕಲ್ ಔಷಧಿಗಳ ಮಾಡಬಾರದು.