ಸಮರಸ ಚಿತ್ರಸುದ್ದಿ: ಕುಂಬಳೆ: ಯುವಕ ಸಂಘ ಗ್ರಂಥಾಲಯ ಮತ್ತು ವಾಚನಾಲಯ ಧರ್ಮತ್ತಡ್ಕ ಇದರ ಆಶ್ರಯದಲ್ಲಿ ಪುಸ್ತಕ ಪ್ರದರ್ಶನ ಕಾರ್ಯಕ್ರಮ ಸಂಘದ ಉಪಾಧ್ಯಕ್ಷ ರಾಮಮೋಹನ್ ಚೆಕ್ಕೆ ಅವರ ಅಧ್ಯಕ್ಷತೆಯಲ್ಲಿ ಜರಗಿತು. ಕಾರ್ಯಕ್ರಮವನ್ನು ಎ.ಯು.ಪಿ. ಶಾಲಾ ಮುಖ್ಯೋಪಾಧ್ಯಾಯ ಎನ್.ಮಹಾಲಿಂಗ ಭಟ್ ಉದ್ಘಾಟಿಸಿದರು. ಧರ್ಮತ್ತಡ್ಕ ಶಾಲಾ ಅಧ್ಯಾಪಕರಾದ ನರೇಶ್ ಭಟ್ ಮತ್ತು ಪ್ರೇಮಲತಾ ಟೀಚರ್ ಶುಭಹಾರೈಸಿದರು. ಸಂಘದ ಕಾರ್ಯದರ್ಶಿ ರವಿಚಂದ್ರ ಐ. ಸ್ವಾಗತಿಸಿ, ಗ್ರಂಥಪಾಲಕಿ ಧನ್ಯಶ್ರೀ ವಂದಿಸಿದರು.