ಪೆರ್ಲ : ವಾಹನಗಳಲ್ಲಿ ತೆರಳಿ ರಸ್ತೆ ಬದಿ ತ್ಯಾಜ್ಯ ಉಪೇಕ್ಷೆ ಮಾಡುವವರ ಸಂಖ್ಯೆ ಅಧಿಕವಿದ್ದು ಬೆದ್ರಂಪಳ್ಳದಿಂದ ಅಮೆಕ್ಕಳದವರೆಗೆ ಈ ರೀತಿ ಮಾಲಿನ್ಯಗಳನ್ನು ಎಸೆಯುವುದರಿಂದ ರಸ್ತೆ ಬದಿಗಳಲ್ಲಿ ಮಾಲಿನ್ಯ ತುಂಬಿ ತುಳುಕಾಡುವಂತಾಗಿದೆ.
ಇಲ್ಲಿನ ಬೆದ್ರಂಪಳ್ಳ ಸಮೀಪದ ಎಣ್ಮಕಜೆ ತಿರುವಿನಿಂದ ಮೇಲಿನ ಬೆದ್ರಂಪಳ್ಳದ ನವಜೀವನ ಬಸ್ ಸ್ಟಾಪ್ ,ಅಮೆಕ್ಕಳದ ವರೆಗೆ ರಸ್ತೆ ಬದಿ ತ್ಯಾಜ್ಯ ಉಪೇಕ್ಷೆ ಯಥೇಚ್ಛವಾಗಿ ಕಂಡು ಬರುತ್ತಿದೆ. ರಾತ್ರಿ ಅಥವ ಬೆಳಗ್ಗಿನ ಸಮಯದಲ್ಲಿ ವಾಹನಗಳಲ್ಲಿ ತೆರಳುವವರು ಈ ರೀತಿ ಮನೆ ಮತ್ತು ಅಂಗಡಿಗಳ ಮಾಲಿನ್ಯಗಳನ್ನು ಈ ರೀತಿ ಉಪೇಕ್ಷಿಸುತ್ತಿರುವುದಾಗಿ ಸ್ಥಳೀಯರು ದೂರಿದ್ದಾರೆ.ಇದೀಗ ಬೈಕಿನಲ್ಲಿ ಬಂದು ಮನೆಯ ಮಾಲಿನ್ಯದ ಕಟ್ಟನ್ನು ರಸ್ತೆ ಬದಿ ಉಪೇಕ್ಷಿಸುವ ದೃಶ್ಯವೊಂದನ್ನು ಸೆರೆ ಹಿಡಿದು ಮಾಧ್ಯಮಕ್ಕೆ ನೀಡಿದ್ದಾರೆ. ಇಲ್ಲಿನ ರಸ್ತೆ ಬದಿಗಳ ಇಕ್ಕೆಲದಲ್ಲಿ ಪ್ಲಾಸ್ಟಿಕ್ ಕಟ್ಟು ಕಟ್ಟಗಳಾಗಿ ತುಂಬಿಸಿ ಬಿಸಾಡುತ್ತಿರುವುದು ಸರ್ವೆ ಸಾಮಾನ್ಯವಾಗಿದೆ. ಮನೆಯಲ್ಲಿ ಬಳಸಿ ಬಿಸಾಡುವ ತ್ಯಾಜ್ಯಗಳು ಮತ್ತು ಮನೆಯಲ್ಲಿ ಶುಭ ಸಮಾರಂಂಭಗಳಿಗೆ ಬಳಸಿದ ಹಾಳೆ ತಟ್ಟೆಗಳು, ಕುಪ್ಪಿಗಳು ಅಧಿಕವಾಗಿ ಕಂಡು ಬರುತ್ತಿದೆ. ಇದೀಗ ಮನೆಗಳಿಂದ ಪ್ಲಾಸ್ಟಿಕ್ ಮಾಲಿನ್ಯಗಳನ್ನು ಸಂಗ್ರಹಿಸಲು ಪಂಚಾಯತ್ ವತಿಯಿಂದ ಹರಿತ ಕರ್ಮ ಕಾರ್ಯಕರ್ತರನ್ನು ನೇಮಕಗೊಳಿಸಿದ್ದರೂ ಅವರಿಗೆ ನೀಡದೆ ಈ ರೀತಿ ಕಾನೂನುಗಳನ್ನು ನಿರ್ಲಕ್ಷಿಸಿ ತ್ಯಾಜ್ಯ ಉಪೇಕ್ಷೆ ನಡೆಸುವವರ ವಿರುದ್ಧ ಸಮಗ್ರ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯ ನಾಗರಿಕರು ಆಗ್ರಹಿಸಿದ್ದಾರೆ.