ಮಾಸ್ಕೊ: ರಷ್ಯಾದಲ್ಲಿ ಇನ್ನೆರಡು ಕಾನ್ಸುಲೇಟ್ ಕಚೇರಿ ಆರಂಭಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ. ಕಜಾನ್ ಮತ್ತು ಯೆಕಟೆರಿನ್‌ಬರ್ಗ್‌ಗಳಲ್ಲಿ ಕಾನ್ಸುಲೇಟ್ ಆರಂಭವಾಗಲಿವೆ ಎಂದು ಅವರು ತಿಳಿಸಿದ್ದಾರೆ.
ಮಾಸ್ಕೊ: ರಷ್ಯಾದಲ್ಲಿ ಇನ್ನೆರಡು ಕಾನ್ಸುಲೇಟ್ ಕಚೇರಿ ಆರಂಭಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ. ಕಜಾನ್ ಮತ್ತು ಯೆಕಟೆರಿನ್‌ಬರ್ಗ್‌ಗಳಲ್ಲಿ ಕಾನ್ಸುಲೇಟ್ ಆರಂಭವಾಗಲಿವೆ ಎಂದು ಅವರು ತಿಳಿಸಿದ್ದಾರೆ.
2 ವರ್ಷಗಳ ಹಿಂದೆ ಭಾರತ-ರಷ್ಯಾದ 'ನಾರ್ತ್-ಸೌತ್ ಕಾರಿಡಾರ್'ಮೂಲಕ ಮೊದಲ ಸರಕು ಸಾಗಣೆ ಮಾಡಲಾಗಿದೆ. ಅದೊಂದು ಗಮನಾರ್ಹ ಸಾಧನೆಯಾಗಿತ್ತು. ಈಗ ಭಾರತ ಮತ್ತು ರಷ್ಯಾ ದೇಶಗಳು ಚೆನ್ನೈ-ವಾಲ್ಡಿವೋಸ್ಟಾಕ್ ಪೂರ್ವ ಕಾರಿಡಾರ್ ತೆರೆಯಲು ಮುಂದಾಗಿವೆ ಎಂದು ಹೇಳಿದರು.
21ನೇ ಶತಮಾನದಲ್ಲಿ ಭಾರತವು ವಿಶ್ವ ಬಂಧು ಪಾತ್ರ ನಿರ್ವಹಿಸಲಿದೆ ಎಂದು ಮೋದಿ ಹೇಳಿದರು.
2015ರಲ್ಲಿ ನಾನು ರಷ್ಯಾಗೆ ಮೊದಲ ಬಾರಿಗೆ ಭೇಟಿ ನೀಡಿದಾಗ 21ನೇ ಶತಮಾನವು ಭಾರತಕ್ಕೆ ಸೇರಿದ್ದಾಗಿರುತ್ತದೆ ಎಂದು ಹೇಳಿದ್ದೆ. ಇಂದು ವಿಶ್ವ ಬಂಧುವಾಗಿ ಭಾರತವು ಜಗತ್ತಿಗೆ ಹೊಸ ವಿಶ್ವಾಸ ನೀಡುತ್ತಿದೆ. ಭಾರತದ ಬೆಳೆಯುತ್ತಿರುವ ಸಾಮರ್ಥ್ಯವು ಇಡೀ ವಿಶ್ವಕ್ಕೆ ಸ್ಥಿರತೆ ಮತ್ತು ಸಮೃದ್ಧಿಯ ಭರವಸೆ ನೀಡಿದೆ. ಭಾರತವು ವಿಶ್ವದ ಬಹುವಿಧದ ಬೆಳವಣಿಗೆಯ ಆಧಾರಸ್ತಂಭವಾಗಿದೆ. ಭಾರತವು ಶಾಂತಿ ಮತ್ತು ರಾಜತಾಂತ್ರಿಕತೆಯ ಮಾತುಗಳನ್ನಾಡಿದಾಗ ಇಡೀ ವಿಶ್ವ ಕೇಳಿಸಿಕೊಳ್ಳುತ್ತದೆ ಎಂದು ಮೋದಿ ಹೇಳಿದ್ದಾರೆ.
ಇದೇವೇಳೆ, ಮೋದಿ ಮಾತುಗಳನ್ನು ಕೇಳುತ್ತಿದ್ದ ಭಾರತೀಯರು ತ್ರಿವರ್ಣ ಧ್ವಜವನ್ನು ಹಿಡಿದು, ಮೋದಿಯನ್ನು ಅಭಿನಂದಿಸಿದರು.