HEALTH TIPS

ವಿದ್ಯಾಶ್ರೀಯಲ್ಲಿ ಕಗ್ಗ ಪ್ರವಚನ

            ಮುಳ್ಳೇರಿಯ: ಇಲ್ಲಿನ ವಿದ್ಯಾಶ್ರೀ ಶಿಕ್ಷಣ ಕೇಂದ್ರದಲ್ಲಿ ಮಂಕುತಿಮ್ಮನ ಕಗ್ಗದ ಕುರಿತು ಉಪನ್ಯಾಸ ನಡೆಯಿತು. ಪ್ರಾರ್ಥನಾ ಸಭೆಯ ನಂತರದ ಅವಧಿಯಲ್ಲಿ ವಿದ್ವಾನ್ ಜಿ.ಎಸ್ ನಟೇಶ್ ಅವರು ಒಂದು ಗಂಟೆಗಳ ಕಾಲ ಮಂಕುತಿಮ್ಮನ ಕಗ್ಗಗಳನ್ನು ವ್ಯಾಖ್ಯಾನಿಸಿ ಉಪನ್ಯಾಸ ನೀಡಿದರು.


           ಈ ಸಂದರ್ಭದಲ್ಲಿ ನಡೆದ ಸಭೆಯಲ್ಲಿ ಅಗಲ್ಪಾಡಿ ಕ್ಷೇತ್ರದ ಆಡಳಿತ ಮೊಕ್ತೇಸರÀ ಅನಂತ ಗೋವಿಂದ ಶರ್ಮ ಕೋಳಿಕ್ಕಜೆ ಮತ್ತು ಸಾಮಾಜಿಕ ಕಾರ್ಯಕರ್ತ ಕೃಷ್ಣಮೂರ್ತಿ ಎಡಪ್ಪಾಡಿ ಮತ್ತು ಮುಖ್ಯೋಪಾಧ್ಯಾಯ ವೇಣುಗೋಪಾಲನ್ ನಾಯರ್ ಉಪಸ್ಥಿತರಿದ್ದರು. ಅನಂತ ಗೋವಿಂದ ಶರ್ಮ ಮಕ್ಕಳಿಗೆ ಸಂಸ್ಕಾರಯುತವಾಗಿ ಬದುಕಬೇಕೆಂದು ಕಿವಿಮಾತನ್ನು ಹೇಳಿದರು. ಉಪನ್ಯಾಸವನ್ನು ನಡೆಸಿಕೊಟ್ಟ ವಿದ್ವಾನ್ ಜಿ.ಎಸ್ ನಟೇಶ್ ಮಕ್ಕಳಲ್ಲಿ ಸಂಸ್ಕಾರವನ್ನು ಹುಟ್ಟುಹಾಕುತ್ತಿರುವ ವಿದ್ಯಾಶ್ರೀ ಶಿಕ್ಷಣ ಕೇಂದ್ರದ ಕುರಿತು ಮೆಚ್ಚುಗೆಯನ್ನು ಸೂಚಿಸಿ, ಭಾರತೀಯ ಸಂಸ್ಕøತಿಯ ಮಹತ್ವವನ್ನು ಸರಳವಾಗಿ ವಿವರಿಸಿದರು.  ಬಾಲಸುಬ್ರಹ್ಮಣ್ಯ ಭಟ್ ಕೋಳಿಕ್ಕಜೆ ಕಾರ್ಯಕ್ರಮವನ್ನು ನಿರೂಪಿಸಿದರು. ಶಾಲಾ ವ್ಯವಸ್ಥಾಪಕರಾದ ಗಣೇಶ ವತ್ಸ ವಿದ್ವಾನ್ ಜಿ.ಎಸ್ ನಟೇಶ್ ಅವರನ್ನು ಸನ್ಮಾನಿಸಿದರು. ಒಂಭತ್ತನೇ ತರಗತಿಯ ಸಮರ್ಥ್ ಸಹಕರಿಸಿದರು. ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries