ತಿರುವನಂತಪುರ: ನಿಷೇಧಿತ ಪ್ಲಾಸಿಕ್ ಬ್ಯಾಗ್ ಮತ್ತು ಉತ್ಪನ್ನಗಳ ಬಳಕೆ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಗುರುವಾರ ಹೇಳಿದರು.
ತಿರುವನಂತಪುರ: ನಿಷೇಧಿತ ಪ್ಲಾಸಿಕ್ ಬ್ಯಾಗ್ ಮತ್ತು ಉತ್ಪನ್ನಗಳ ಬಳಕೆ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಗುರುವಾರ ಹೇಳಿದರು.
ಮುಖ್ಯಮಂತ್ರಿ ಅವರ ನೇತೃತ್ವದಲ್ಲಿ ನಡೆದ ಆನ್‌ಲೈನ್ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಮುಖ್ಯಮಂತ್ರಿಗಳ ಕಚೇರಿಯು ಹೇಳಿಕೆ ಬಿಡುಗಡೆ ಮಾಡಿದೆ.
ಸಭೆಯಲ್ಲಿ ಲೋಕೋಪಯೋಗಿ, ಕಾರ್ಮಿಕ, ಆಹಾರ, ಕ್ರೀಡೆ, ರೈಲ್ವೆ, ಆರೋಗ್ಯ ಮತ್ತು ಜಲ ಸಂಪನ್ಮೂಲ ಇಲಾಖೆಗಳ ಸಚಿವರು, ಕೆಲ ಶಾಸಕರು, ತಿರುವನಂತಪುರ ಮೇಯರ್ ಮತ್ತು ಮುಖ್ಯಕಾರ್ಯದರ್ಶಿ ಭಾಗಿಯಾಗಿದ್ದರು ಎಂದು ತಿಳಿಸಿದೆ.
ರಸ್ತೆಗಳಲ್ಲಿ ಮತ್ತು ನದಿಗಳಲ್ಲಿ ತ್ಯಾಜ್ಯ ಎಸೆಯಲು ಬಳಸುವ ವಾಹನದ ನೋಂದಣಿ ರದ್ದು, ಕೃತಕ ಬುದ್ಧಿಮತ್ತೆ ಕ್ಯಾಮೆರಾ ಅಳವಡಿಕೆ ಸೇರಿ ಪ್ಲಾಸ್ಟಿಕ್ ಬಳಕೆ ನಿಲ್ಲಿಸುವ ಕುರಿತಂತೆ ಹಲವು ಸಲಹೆಗಳನ್ನು ಸಭೆಯಲ್ಲಿ ಚರ್ಚಿಸಲಾಯಿತು ಎಂದೂ ಹೇಳಿದೆ.