ಬದಿಯಡ್ಕ: ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಅವರ ಚಾತುರ್ಮಾಸ್ಯ ವ್ರತಾಚರಣೆ ಯಶಸ್ವಿಗಾಗಿ ಸಮಾಲೋಚನಾ ಸಭೆ ಇಂದು(ಜುಲೈ 20) ಸಂಜೆ 5.30ಕ್ಕೆ ಶ್ರೀಮಠದಲ್ಲಿ ನಡೆಯಲಿದೆ. ಶ್ರೀಮಠದ ಶಿಷ್ಯರು, ವಿವಿಧ ವಲಯಗಳ ಪ್ರಮುಖರು ಭಾಗವಹಿಸಲಿರುವರು. ಎಡನೀರುಶ್ರೀ ಗಳ ಚಾತುರ್ಮಾಸ್ಯ ಸಮಾರಂಭ ಜುಲೈ 21ರಿಂದ ಸೆ. 18ರ ವರೆಗೆ ಶ್ರೀಮಠದಲ್ಲಿ ಜರುಗಲಿದೆ.