HEALTH TIPS

ಕುಲಪತಿ ಇನ್ನು ಮುಂದೆ ಕುಲಗುರು: ಮಧ್ಯ ಪ್ರದೇಶ ಸಂಪುಟ ಅಸ್ತು

          ಭೋಪಾಲ್‌: ವಿಶ್ವವಿದ್ಯಾಲಯಗಳ 'ಕುಲಪತಿ' ಹುದ್ದೆಯನ್ನು 'ಕುಲಗುರು' ಎಂದು ಮರುನಾಮಕರಣ ಮಾಡಲು ಮಧ್ಯ ಪ್ರದೇಶ ಸಚಿವ ಸಂಪುಟ ಸೋಮವಾರ ಒಪ್ಪಿಗೆ ಸೂಚಿಸಿದೆ.

           ಇದೇ ತಿಂಗಳಲ್ಲಿ ನಾವು ಗುರು ಪೂರ್ಣಿಮೆಯನ್ನು ಆಚರಿಸುವ ಹಿನ್ನೆಲೆಯಲ್ಲಿ, ನಮ್ಮ ಮೂಲ ಸಂಸ್ಕೃತಿಗೆ ಅನುಗುಣವಾಗಿ ಕುಲಪತಿಗಳನ್ನು 'ಕುಲಗುರು' ಎಂದು ಸಂಬೋಧಿಸುವ ಸರ್ಕಾರದ ಈ        ನಿರ್ಧಾರ ಹೆಚ್ಚಿನ ಮಹತ್ವ ಪಡೆದುಕೊಂಡಿದೆ.

             ಇನ್ನು ಮುಂದೆ ಮಧ್ಯ ಪ್ರದೇಶದಲ್ಲಿನ ಎಲ್ಲ ವಿಶ್ವವಿದ್ಯಾಲಯಗಳ ಕುಲಪತಿಗಳನ್ನು 'ಕುಲಗುರು' ಎಂದೇ ಸಂಬೋಧಿಸಲಾಗುವುದು ಎಂದು ಮುಖ್ಯಮಂತ್ರಿ ಮೋಹನ್‌ ಯಾದವ್‌ ಹೇಳಿದ್ದಾರೆ.

              ಸರ್ಕಾರದ ಈ ಪ್ರಸ್ತಾವನೆ ಬಗ್ಗೆ ಹಲವು ರಾಜ್ಯಗ‌ಳು ಆಸಕ್ತಿ ತೋರಿದ್ದು, ಪ್ರಸ್ತಾವನೆಯ ಪ್ರತಿಗಳನ್ನು ನೀಡುವಂತೆ ಮನವಿ ಮಾಡಿವೆ. ಇದುವರೆಗೆ ಚಾಲ್ತಿಯಲ್ಲಿದ್ದ ಕುಲಪತಿ ಶಬ್ದವು ಹಲವು ಸಂದರ್ಭದಲ್ಲಿ ಸಮಸ್ಯೆಗೆ ಕಾರಣವಾಗಿತ್ತು. ಅದರಲ್ಲಿಯೂ ಆ ಹುದ್ದೆಯಲ್ಲಿದ್ದ ಮಹಿಳೆಯರಿಗೆ ಮುಜುಗರ ಉಂಟು ಮಾಡುತ್ತಿತ್ತು ಎಂದು ಅವರು ಹೇಳಿದ್ದಾರೆ.

              ಹಿಂದೆ ಶಿವರಾಜ್‌ ಸಿಂಗ್‌ ಚೌಹಾಣ್‌ ಅವರು ಮುಖ್ಯಮಂತ್ರಿಯಾಗಿದ್ದಾಗ ಮೊದಲ ಬಾರಿಗೆ ಕುಲಪತಿ ಹುದ್ದೆಯ ಮರುನಾಮಕರಣ ಪ್ರಸ್ತಾವ ಬಂದಿತ್ತಾದರೂ, ಅನುಷ್ಠಾನವಾಗಿರಲಿಲ್ಲ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries