ಕಾಸರಗೋಡು: ಕುವೈತ್‍ನಲ್ಲಿ ಬೆಂಕಿ ಆಕಸ್ಮಿಕದಲ್ಲಿ ಜೀವತೆತ್ತ ಚೆರ್ಕಳ ಕುಂಡಡ್ಕ ನಿವಾಸಿ ರಂಜಿತ್ ಅವರ ಮನೆಗೆ ಸಚಿವ ರಾಮಚಂದ್ರನ್ ಕಡನ್ನಪಳ್ಳಿ ಸರ್ಕಾರದ ನೆವರಿನೊಂದಿಗೆ ಭೇಟಿನೀಡಿ, ಕುಟುಂಬಕ್ಕೆ ಸಾಂತ್ವನ ಹೇಳಿದರು. ಈ ಸಂದರ್ಭ ಚೆರ್ಕಳ ರಂಜಿತ್ ಅವರ ಕುಟುಂಬ ಸದಸ್ಯರಿಗೆ ರಾಜ್ಯ ಸರ್ಕಾರ ಹಾಗೂ ನೋರ್ಕಾ ವತಿಯಿಂದ ನೀಡಲಾದ ಧನಸಹಾಯವನ್ನು ಹಸ್ತಾಂತರಿಸಲಾಯಿತು. ಶಾಸಕರಾದ ಎನ್.ಎ.ನೆಲ್ಲಿಕುನ್, ಸಿ.ಎಚ್. ಕುಞಂಬು, ಜಿಲ್ಲಾಧಿಕಾರಿ ಕೆ.ಇನ್ಬಾಶೇಖರ್, ನಾರ್ಕಾ ರೂಟ್ಸ್ ಪ್ರಾದೇಶಿಕ ವ್ಯವಸ್ಥಾಪಕ ಸಿ.ರವೀಂದ್ರನಾಥ, ಚೆಂಗಳ ಗ್ರಾಮ ಪಂಚಾಯಿತಿ ಅಧ್ಯಕ್ಷ ಖಾದರ್ ಬದರಿಯಾ, ತಹಸೀಲ್ದಾರ್ ಎಂ.ಮುರಳಿ ಜತೆಗಿದ್ದರು. ಪರಿಹಾರ ಧನ ಸೇರಿದಂತೆ 14 ಲಕ್ಷ ರೂ.ಗ ಚೆಕ್ಕನ್ನು ಸಚಿವರು ಹಸ್ತಾಂತರಿಸಿದರು.